ಶಕ್ತಿ ನಗರದ ಶಕ್ತಿ ವಸತಿ ಶಾಲೆಯಲ್ಲಿ ಹದಿ ಹರೆಯದ ಬಾಲಕಿಯರ ಶಾರೀರಿಕ ಸಮಸ್ಯೆ ಪರಿಹಾರ ಕುರಿತು ರುಕ್ಮಿಣಿ ಶೆಟ್ಟಿ ನರ್ಸಿಂಗ್ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳಿಂದ ಸಂಶೋಧನಾ ಕಾರ್ಯಾಗಾರ ನಡೆಯಿತು.
ಸುಮಾರು 13 ರಿಂದ 18 ವರ್ಷದ ಬಾಲಕಿಯರಲ್ಲಿ ಶಾರೀರಿಕ ಬದಲಾವಣೆಗಳು, ಆರೋಗ್ಯದಲ್ಲಿನ ಏರುಪೇರು ಸರ್ವೇ ಸಾಮಾನ್ಯ. ಇದಕ್ಕೆ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಉತ್ತಮ ಚಿಕಿತ್ಸೆ.
ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು ಒಳ್ಳೆಯ ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡುವುದು ಸಾಧ್ಯ. ಕಡಿಮೆ ಪ್ರಮಾಣದಲ್ಲಿ ನೀರು ಸೇವನೆ, ದೇಹದ ಉಷ್ಣತೆಯನ್ನು ಹೆಚ್ಚಿಸುವ ಪದಾರ್ಥಗಳ ಮೂಲಕ ಕಿಡ್ನಿ, ಮೂತ್ರ ನಾಳದ ಸೋಂಕು ಉಂಟಾಗುತ್ತದೆ. ಸೊಪ್ಪು ತರಕಾರಿ, ಹಣ್ಣು ಸೇವನೆಯು ಸೋಂಕು ತರುವ ಬ್ಯಾಕ್ಟೀರಿಯಗಳಿಂದ ರಕ್ಷಣೆ ನೀಡುತ್ತದೆ ಎಂದರು. ಹಾಗಾಗಿ ಉತ್ತಮ ಆಹಾರ ಮತ್ತು ನೀರು ಸೇವನೆಯ ಮೂಲಕ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸಿಕೊಂಡು ಲವಲವಿಕೆಯಿಂದ ತಮ್ಮ ಹದಿಹರೆಯವನ್ನು ಕಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮೊದಲಿಗೆ ಮೂತ್ರ ನಾಳದ ಸೋಂಕಿಗೆ ಸಂಬಂಧಿಸಿದ ಪ್ರಶ್ನಾವಳಿಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಸೋಂಕಿಗೆ ಸಂಬಂಧಪಟ್ಟ ಮಾಹಿತಿ ನೀಡಿ ಅದಕ್ಕೆ ಮುನ್ನೆಚ್ಚೆರಕೆ, ಪರಿಹಾರವನ್ನು ಸೂಚಿಸುವುದರ ಮೂಲಕ ಈ ಕಾರ್ಯಗಾರವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ 5 ನೇ ತರಗತಿಯಿಂದ 8 ನೇ ತರಗತಿಯ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರು ಪಾಲ್ಗೊಂಡರು. ಶಿಕ್ಷಕಿ ಸ್ವಾತಿ ವಂದನಾರ್ಪಣೆ ಮಾಡಿದರು.