ಮಂಗಳೂರು : ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್‌ನ ಸರೋಶ್ ಸ್ಮಾರಕ ಈಜುಕೊಳದಲ್ಲಿ ಸ್ವಿಮ್ಮಿಂಗ್ ಕ್ಯಾಂಪ್ ದಿನಾಂಕ 3-4-2023 ರಂದು ಉದ್ಘಾಟನೆಗೊಂಡಿತು. ಮಂಗಳ ಸ್ವಿಮ್ಮಿಂಗ್ ಕ್ಲಬ್ ಮಂಗಳೂರು ಮತ್ತು ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್‌ನ ಸಹಭಾಗಿತ್ವದಲ್ಲಿ ಏಪ್ರಿಲ್ 3 ರಿಂದ 26 ಮತ್ತು ಮೇ 2 ರಿಂದ 25 ರ ವರೆಗೆ ನಡೆಯಲಿರುವ ಈ ಸ್ವಿಮ್ಮಿಂಗ್ ಕ್ಯಾಂಪ್ ಸೋಮವಾರದಂದು ಶುಭಾರಂಭಗೊಂಡಿತು. ದೀಪ ಬೆಳಗಿಸಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ತಂದ ಪವಿತ್ರ ತೀರ್ಥವನ್ನು ಈಜುಕೊಳಕ್ಕೆ ಪ್ರೋಕ್ಷಣೆ ಮಾಡುವ ಮೂಲಕ ಸ್ವಿಮ್ಮಿಂಗ್ ಕ್ಯಾಂಪನ್ನು ಉದ್ಘಾಟನೆ ಮಾಡಿದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ನೂತನ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆಯವರು ಶಿಬಿರವನ್ನು ಉದ್ದೇಶಿಸಿ ಮಾತನಾಡಿ ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಈ ಸ್ವಿಮ್ಮಿಂಗ್ ಕ್ಯಾಂಪ್ ಬಹಳಷ್ಟು ಪ್ರತಿಭೆಗಳಿಗೆ ಅವಕಾಶವಾಗಿದೆ. ಮಕ್ಕಳಿಗೂ ಮತ್ತು ಹಿರಿಯರಿಗೂ ಶಿಬಿರದಲ್ಲಿ ಅವಕಾಶವನ್ನು ನೀಡಿದ್ದು ಆಗಮಿಸಿದ ಎಲ್ಲಾ ಶಿಬಿರಾರ್ಥಿಗಳು ಈ ಶಿಬಿರದಿಂದ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಲಿ ಶಿಬಿರವು ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಈ ಸ್ವಿಮ್ಮಿಂಗ್ ಕ್ಯಾಂಪ್‌ನ ಉದ್ಘಾಟನಾ ಸಮಾರಂಭದಲ್ಲಿ ಮಂಗಳ ಸ್ವಿಮ್ಮಿಂಗ್ ಕ್ಲಬ್‌ನ ಕಾರ್ಯದರ್ಶಿಗಳಾದ ಶಿವಾನಂದ ಗಟ್ಟಿ ಅವರು ಶಿಬಿರದ ನಿಯಮಗಳನ್ನು ತಿಳಿಸಿದರು. ಶಕ್ತಿ ರೆಸಿಡೆನ್ಶಿಯಲ್ ಶಾಲಾ ಪ್ರಾಂಶುಪಾಲರು ರವಿಶಂಕರ್ ಹೆಗಡೆ ಸಂಸ್ಥೆಯ ಈಜು ತರಬೇತುದಾರರಾದ ರಾಜೇಶ್ ಖಾರ್ವಿ, ಮಂಗಳ ಸ್ವಮ್ಮಿಂಗ್ ಕ್ಲಬ್‌ನ ಕಾರ್ಯದರ್ಶಿ ಶಿವಾನಂದ ಗಟ್ಟಿ, ಈಜು ತರಬೇತುದಾರರಾದ ಪ್ರಥಮ್, ತೇಜಸ್ವಿನಿ, ಪ್ರೇರಣ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕನ್ನಡ ಶಿಕ್ಷಕರಾದ ಶರಣಪ್ಪ ಸಮಾರಂಭವನ್ನು ನಿರೂಪಿಸಿ ವಂದಿಸಿದರು.