ಶಿಕ್ಷಣ ಎಂದರೆ ವ್ಯಕ್ತಿತ್ವ ನಿರ್ಮಾಣ. ಶಿಕ್ಷಣದಿಂದ ವ್ಯಕ್ತಿ ತಾನು ಮಾನಸಿಕ, ಆಧ್ಯಾತ್ಮಿಕ, ಬೌದ್ಧಿಕವಾಗಿ ಜೌನತ್ಯಕ್ಕೆ ಏರುವುದಲ್ಲದೆ ಇತರರನ್ನೂ ಉನ್ನತಿಯತ್ತ ಕೊಂಡೊಯ್ಯುತ್ತಾನೆ. ಸ್ವಾಮಿ ವಿವೇಕಾನಂದರು ಯುವಜನತೆ ಹಾಗು ಶಿಕ್ಷಣಕ್ಕೆ ಮಹತ್ವವನ್ನು ನೀಡಿದವರು. ಸದ್‌ಚಿಂತನೆಯ ಮೂಲಕ ಯುವಜನತೆಯಲ್ಲಿ ರಾಷ್ಟ್ರ ನಿರ್ಮಾಣದ ಕಿಚ್ಚು ಹಚ್ಚಿದವರು. ಅವರು ಸಾರಿದ ತತ್ವಗಳು, ಮಾಡಿದ ಭಾಷಣಗಳು ಕೇವಲ ಭಾರತಕ್ಕಷ್ಟೇ ಅಲ್ಲದೆ ರಾಷ್ಟ್ರಾತೀತ ಹಾಗೂ ಸಾರ್ವಕಾಲಿಕ ಎಂದು ಶಕ್ತಿ ವಸತಿ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನದ ಪ್ರಯುಕ್ತ ನಡೆದ ಶಾಲಾ ಸಭೆಯಲ್ಲಿ ಪ್ರಾಂಶುಪಾಲರಾದ ವಿದ್ಯಾಕಾಮತ್ ಜಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿದವರು. ಆದರೆ ಮಾನವೀಯ ಮೌಲ್ಯಗಳು ನಶಿಸುತ್ತಿರುವ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗಳನ್ನು, ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ಪುಸ್ತಕಗಳನ್ನು, ಮಹಾತ್ಮರಜೀವನ ಚರಿತ್ರೆಗಳನ್ನು ಓದುವ ಹವ್ಯಾಸಗಳನ್ನು ವಿದ್ಯಾರ್ಥಿದೆಸೆಯಿಂದಲೇ ಅಭ್ಯಾಸಿಸಬೇಕು ಎಂದರು. ಶಾಲಾ ಸಭೆಯಲ್ಲಿ 3ನೇ ತರಗತಿಯ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ತತ್ವಗಳನ್ನು ಬಿತ್ತಿಚಿತ್ರಗಳನ್ನು ವಿವೇಕಾನಂದರ ವೇಷವನ್ನು ಧರಿಸಿ ಪ್ರಸ್ತುತ ಪಡಿಸಿದರು.
3ನೇ ತರಗತಿಯ ಕುಮಾರಿ ರೀಟ ಶಾಲಾ ಸಭೆಯ ನಿರೂಪಣೆ ಮತ್ತು ಕುಮಾರಿ ಶ್ರೇಷ್ಠ ವಂದನಾರ್ಪಣೆ ಮಾಡಿದರು.