Call Us :
+91 96860 00046
CBSE

Shakthi Education Trust

+91 9108043552
info@shakthi.edu.in

ಶಕ್ತಿ ರೆಸಿಡೆನ್ಯಿಯಲ್ ಶಾಲೆಯಲ್ಲಿ ಶಕ್ತಿ ಕ್ಯಾನ್ ಕ್ರಿಯೇಟ್ ಬೇಸಿಗೆ ಶಿಬಿರಕ್ಕೆ ಚಾಲನೆ

ಮಂಗಳೂರಿನ ಶಕ್ತಿ ನಗರದಲ್ಲಿರುವ ಶಕ್ತಿ ವಸತಿ ಶಾಲೆಯಲ್ಲಿ ಶಕ್ತಿ ಕ್ಯಾನ್ ಕ್ರಿಯೇಟ್ ಬೇಸಿಗೆ ಶಿಬಿರವು ಏಪ್ರಿಲ್ 1 ರಂದು ರೇಷ್ಮಾ ಮೆಮೋರಿಯಲ್ ಆಡಿಟೋರಿಯಂನಲ್ಲಿ ಉದ್ಘಾಟನೆಗೊಂಡಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಾದೇಶಿಕ ವಿಜ್ಞಾನ ಕೇಂದ್ರ ಪಿಲಿಕುಳ ಮಂಗಳೂರು ಇಲ್ಲಿನ ಸಂಯೋಜಕರಾಗಿರುವ ಶ್ರೀ ಜಗನ್ನಾಥ್ ಅವರು ದೀಪ ಬೆಳಗಿಸಿ ಶಕ್ತಿ ಕ್ಯಾನ್ ಕ್ರಿಯೇಟ್ ಮಹತ್ವವನ್ನು ಸಾರುವ ಫಲಕವನ್ನು ಪ್ರದರ್ಶಿಸಿ ಚಾಲನೆ ನೀಡಿದರು.

ಪ್ರಾಸ್ತಾವಿಕವಾಗಿ ಶಕ್ತಿ ವಿದ್ಯಾ ಸಂಸ್ಥೆಯ ಮುಖ್ಯ ಸಲಹೆಗಾರರಾಗಿರುವ ಶ್ರೀ ರಮೇಶ್ ಕೆ. ಅವರು ಮಾತನಾಡಿ ಇಲ್ಲಿ ಮಕ್ಕಳ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತದೆ, ಅದರ ಜೊತೆಗೆ ಶ್ಲೋಕ, ಯೋಗಾಭ್ಯಾಸದಂತಹ ಒಳ್ಳೆಯ ದಿನಚರಿಯನ್ನು ಕೂಡ ಮಕ್ಕಳಿಗೆ ಕಲಿಸಿಕೊಡಲಾಗುವುದು, ಇದರಲ್ಲಿ ಮಕ್ಕಳು ತುಂಬಾ ಆಸಕ್ತಿಯಿಂದ ಭಾಗವಹಿಸುತ್ತಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಾದೇಶಿಕ ವಿಜ್ಞಾನ ಕೇಂದ್ರ ಪಿಲಿಕುಳ ಇವರು ಮಾತನಾಡಿ ಶಕ್ತಿ ಕ್ಯಾನ್ ಕ್ರಿಯೇಟ್ ಎನ್ನುವ ಶೀರ್ಷಿಕೆಯೇ ವಿಶೇಷವಾಗಿದೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಶಾಲೆಗಳಲ್ಲಿ ಬೇಸಿಗೆ ಶಿಬಿರವನ್ನು ನಡೆಸುತ್ತಾರೆ, ಆದರೆ ಈ ಶಾಲೆಯ ಬೇಸಿಗೆ ಶಿಬಿರವು ಎಲ್ಲಕ್ಕಿಂತ ವಿಭಿನ್ನವಾಗಿದೆ. ಇಲ್ಲಿ ಕೇವಲ ಕೌಶಲ್ಯ ಪ್ರದರ್ಶನ ಮಾತ್ರವಲ್ಲದೆ ಭಾರತೀಯ ಸಂಸ್ಕೃತಿ, ಸಂಪ್ರದಾಯದ ಪರಿಚಯವೂ ವಿದ್ಯಾರ್ಥಿಗಳಿಗೆ ದೊರಕುವುದು ಎಂದರು. ಪ್ರಾದೇಶಿಕ ವಿಜ್ಞಾನ ಕೇಂದ್ರ ಪಿಲಿಕುಳದಲ್ಲಿ ನಡೆಯುತ್ತಿರುವ ವಿಜ್ಞಾನ ವಿಷಯದ ತರಬೇತಿ ಇತರೆ ವಿಷಯಗಳ ಕುರಿತಂತೆ ಅವರು ಸಮಗ್ರವಾದ ಮಾಹಿತಿ ನೀಡಿದರು. ಮಕ್ಕಳು ಈ ಸಂಸ್ಥೆಯ ಸದುಪಯೋಗವನ್ನು ಪಡೆಯುವಂತೆ ತಿಳಿಸಿದರು.

ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿಯಾಗಿರುವ ಡಾ ಕೆ. ಸಿ. ನಾೖಕ್‌ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಶಕ್ತಿ ವಿದ್ಯಾ ಸಂಸ್ಥೆಯು ಪ್ರತಿ ವರ್ಷವು ಇಂತಹ ಬೇಸಿಗೆ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿದೆ. ಇದು ಮಕ್ಕಳ ಸರ್ವಾಂಗಿಣ ಅಭಿವೃದ್ದಿಗೆ ಪೂರಕವಾದ ಕೆಲಸವಾಗಿದೆ.ಇಂತಹ ಶಿಬಿರವನ್ನು ಎಲ್ಲರೂ ಖುಷಿಯಿಂದ ಆನಂದಿಸಬೇಕೆಂದು ಹೇಳಿದರು.

ಶಕ್ತಿ ವಸತಿ ಶಾಲೆಯ 1 ಮತ್ತು 2 ನೇ ತರಗತಿಯ ಸಂಯೋಜಕಿಯಾಗಿರುವ ಶ್ರೀಮತಿ ಪ್ರಿಯದರ್ಶಿನಿ ಅವರು ಏಪ್ರಿಲ್ 1  ರಿಂದ 11 ರ ವರೆಗೆ ನಡೆಯಲಿರುವ ಈ ಬೇಸಿಗೆ ಶಿಬಿರವು ಹೊಂದಿರುವ ವಿವಿಧ ಚಟುವಟಿಕೆಗಳ ವಿವರಗಳನ್ನು ನೀಡಿದರು.

ವೇದಿಕೆಯಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಪಿಲಿಕುಳದ ಪ್ರಮುಖರಾದ ರುತ್ವಿಕ್ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲಕರಾದ ಡಾ. ಎಲ್.ಬಿ. ಕಾಮತ್‌ರವರು ಉಪಸ್ಥಿತರಿದ್ದರು. ಶಕ್ತಿ ರೆಸಿಡೆನ್ಯಿಯಲ್ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಸ್ವಾಗತಿಸಿ, ಶಕ್ತಿ ವಸತಿ ಶಾಲೆಯ 6 ಮತ್ತು 7 ನೇ ತರಗತಿಯ ಸಂಯೋಜಕಿಯಾಗಿರುವ ಶ್ರೀಮತಿ ಚೇತನಾ ತಲಪಾಡಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

  Mrs. Babitha Suraj Principal MSc, B.Ed 25 Years’ Experience...