Shakti Residential School has received the Swachh Vidyalaya Award 2021-2022 from the Education Department of the Central Government.
The excellent basic facilities provided at Shakthi Residential School has been recognised by the Department of School Education and Literacy, Government of India. The school has received 5 stars with 97% marks for the cleanest toilets in the District, making way for the Swachh Vidyalaya Puraskar 2021-22.
The Administrator of the Shakthi Education Trust Dr. K.C Naik has thanked the Education and Literacy Department of the Central Government. Secretary Sanjit Naik, Chief Advisor Ramesh.K, Institute Development Officer Prakyath Rai, Shakti PU College Principal Prathviraj has appreciated this recognition.
ಶಕ್ತಿ ರೆಸಿಡೆನ್ಶಿಯಲ್ ಶಾಲೆಗೆ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯಿಂದ ಸ್ವಚ್ಛ ವಿದ್ಯಾಲಯ ಪುರಸ್ಕಾರ 2021-22
ಮಂಗಳೂರು : ಶಕ್ತಿ ರೆಸಿಡೆನ್ಶಿಯಲ್ ಶಾಲೆಗೆ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯಿಂದ ಸ್ವಚ್ಛ ವಿದ್ಯಾಲಯ ಪುರಸ್ಕಾರ 2021-22 ಲಭಿಸಿದೆ. ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯು ಅತ್ಯುತ್ತಮ ಮೂಲಭೂತ ಸೌಕರ್ಯವನ್ನು ಹೊಂದಿದ್ದು, ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಜಿಲ್ಲಾ ಮಟ್ಟದಲ್ಲಿ ಸ್ವಚ್ಛ ಶೌಚಾಲಯ ಹೊಂದಿರುವ ಶಾಲೆಯೆಂದು ಗುರುತಿಸಿ 97% ಅಂಕದೊಂದಿಗೆ 5 ಸ್ಟಾರ್ ನೀಡಿದೆ. ಈ ಮೂಲಕ ಸ್ವಚ್ಛ ವಿದ್ಯಾಲಯ ಪುರಸ್ಕಾರ 2021-22 ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚೆಗೆ ಜಿಲ್ಲಾ ಪಂಚಾಯತ್‌ನ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿ.ಇ.ಒ ಡಾ| ಕುಮಾರ್ ಐ.ಎ.ಎಸ್, ಜಿಲ್ಲಾ ಉಪ ನಿರ್ದೇಶಕರಾದ ಸುಧಾಕರ್ ಇವರು ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ ಕಾಮತ್‌ರಿಗೆ ಈ ಪ್ರಶಸ್ತಿ ಪತ್ರವನ್ನು ನೀಡಿದರು.
ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಸ್ವಚ್ಛತೆಯನ್ನು ಗುರುತಿಸಿರುವ ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯನ್ನು ಆಡಳಿತಾಧಿಕಾರಿ ಡಾ| ಕೆ.ಸಿ. ನಾೖಕ್, ಕಾರ್ಯದರ್ಶಿ ಸಂಜಿತ್ ನಾೖಕ್, ಪ್ರಧಾನ ಸಲಹೆಗಾರ ರಮೇಶ್.ಕೆ, ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪ್ರಥ್ವಿರಾಜ್ ಅಭಿನಂದಿಸಿದ್ದಾರೆ.