Call Us :
+91 96860 00046
CBSE

Shakthi Education Trust

+91 9108043552
info@shakthi.edu.in

ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಂದ ಶಕ್ತಿ ಮೇಳದ ಆಯೋಜನೆ

ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಥಮಿಕ ವಿಭಾಗ (3ನೇ ತರಗತಿಯಿಂದ 7ನೇ ತರಗತಿ)ದ ವರೆಗಿನ ವಿದ್ಯಾರ್ಥಿಗಳಿಗೆ ಕಲೆ ಏಕೀಕರಣ (ಆರ್ಟ್ ಇಂಟಿಗ್ರೇಟೆಡ್) ಪ್ರಾಜೆಕ್ಟ್‌ನ ಪ್ರಯುಕ್ತ ಶಕ್ತಿ ಮೇಳವನ್ನು ಇಂದು ಸಂಸ್ಥೆಯ ಆಡಿಟೋರಿಯಂನಲ್ಲಿ ಆಯೋಜಿಸಲಾಗಿತ್ತು.

ಇದರ ಉದ್ದೇಶ ಗಣಿತ, ಇಂಗ್ಲೀಷ್, ವಿಜ್ಞಾನ, ಕನ್ನಡ ತರಗತಿಯಲ್ಲಿ ಕಲಿಯುವ ವಿಷಯಗಳನ್ನು ನಿಜ ಜೀವನದಲ್ಲಿ ಅಳವಡಿಸಿ ಹೆಚ್ಚಿನ ಜ್ಞಾನವನ್ನು ಸಂಪಾದಿಸುವುದಾಗಿದೆ. ಗಣಿತವನ್ನು ತೆಗೆದುಕೊಂಡಾಗ ವ್ಯವಹಾರದಲ್ಲಿ ಬರುವ ಲಾಭ ನಷ್ಟವನ್ನು ಲೆಕ್ಕಾಚಾರ ಮಾಡುವುದಾಗಿರುತ್ತದೆ. ಇಂಗ್ಲೀಷ್ ಮತ್ತು ಕನ್ನಡ ವ್ಯವಹಾರಿಕ ಸಂವಹನ ನಡೆಸುವ ಭಾಷೆಯಾಗಿರುತ್ತದೆ. ವಿಜ್ಞಾನವು ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿರುತ್ತದೆ. ಈ ಎಲ್ಲಾ ವಿಷಯಗಳನ್ನು ತರಗತಿಯ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶಕ್ತಿ ಮೇಳದ ಮೂಲಕ ಸ್ಟಾಲ್‌ಗಳಲ್ಲಿ ಪ್ರದರ್ಶನ ಮತ್ತು ಮಾರಟವನ್ನು ಮಾಡಿದರು. ಒಟ್ಟು 60 ಸ್ಟಾಲ್‌ಗಳಿದ್ದವು. ಈ ಸ್ಟಾಲ್‌ಗಳಲ್ಲಿ ಹಣ್ಣು ಹಂಪಲು ಮತ್ತು ತರಕಾರಿಗಳು, ಸ್ಟೇಶನರಿ, ಆಟಗಳು, ಆಹಾರ ವಸ್ತುಗಳು, ತರಕಾರಿ ಬೀಜಗಳು, ಔಷಧಿ ಸಸ್ಯಗಳು, ಹೂವಿನ ಗಿಡಗಳು, ಕಲಾ ಸ್ಟಾಲ್, ಪುಸ್ತಕಗಳು, ಕೈಯಿಂದ ಮಾಡಿದ ಚಿತ್ತಕಲೆ, ಶಿಲ್ಪ ಮತ್ತು ಅಲಂಕಾರಿಕ ವಸ್ತುಗಳು ಕೇಂದ್ರ ಬಿಂದುವಾಗಿದ್ದವು. ವಸ್ತುಗಳನ್ನು ಖರೀದಿಸಿದವರಿಗೆ ರಶೀದಿಯನ್ನು ನೀಡಿರುವುದು ವಿಶೇಷವಾಗಿದೆ.

ಈ ಕಾರ್ಯಕ್ರಮವನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್‌ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಉದ್ಯಮ ಕೌಶಲ್ಯದ ವೃದ್ಧಿಸಬೇಕೆಂಬುವುದು ಇದರ ಉದ್ದೇಶವಾಗಿದೆ. ನಾವುಗಳು ಹಣಕಾಸು ನಿರ್ವಹಣೆ ಸಂವಹನ, ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಜ್ಞಾನವನ್ನು ಸಂಪಾದಿಸಬೇಕಾಗಿದೆ. ಇಂತಹ ಮೇಳವನ್ನು ಆಯೋಜಿಸಿದಾಗ ಅದರಲ್ಲಿ ಭಾಗವಹಿಸಿ ವ್ಯಾಪಾರ, ವ್ಯವಹಾರಗಳನ್ನು ಮಾಡಿದಾಗ ನಿಜವಾದ ಆತ್ಮ ವಿಶ್ವಾಸವು ವೃದ್ಧಿಯಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು.

ಶಕ್ತಿ ಮೇಳದಲ್ಲಿ ಹಣ್ಣು ಹಂಪಲುಗಳ ಸ್ಟಾಲ್ ಆರೋಗ್ಯಕರ ಆಹಾರವನ್ನು ಉತ್ತೇಜಿಸುವುದಾಗಿದೆ. ಸ್ಟೇಶನರಿ – ಸೃಜನಶೀಲತೆ ಮತ್ತು ವ್ಯಾಪರೀಕರಣವನ್ನು ಪ್ರೋತ್ಸಾಹಿಸುವುದಾಗಿದೆ, ಆಟಗಳು – ತಂತ್ರಜ್ಞಾನದ ಚಿಂತನೆ ಮತ್ತು ಸಮಸ್ಯೆಗಳನ್ನು ಪರಿಹರಿಸುವುದಾಗಿದೆ. ಆಹಾರ ವಸ್ತುಗಳು ನೈರ್ಮಲ್ಯ ಮತ್ತು ಪೋಷಕಾಂಶಯುಕ್ತು ಆಹಾರದ ಮಹತ್ವವನ್ನು ತಿಳಿಸುವುದಾಗಿದೆ. ನರ್ಸರಿ ಸ್ಟಾಲ್ – ಗಿಡಗಳನ್ನು ಮಾರಾಟ ಮಾಡಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಕಲಾ ಸ್ಟಾಲ್ – ವಿದ್ಯಾರ್ಥಿಗಳ ಕಲಾ ಕೌಶಲ್ಯಗಳನ್ನು ಉತ್ತೇಜಿಸುವುದಾಗಿದೆ.

ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಮತ್ತು ಶಿಕ್ಷಕ – ಶಿಕ್ಷಕೇತರರು ಸ್ಟಾಲ್‌ಗಳಿಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳನ್ನು ಪೋತ್ಸಾಹಿಸಿದರು. ವಿದ್ಯಾರ್ಥಿಗಳು 5, 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ನಗದು ರಹಿತ ವ್ಯವಹಾರವನ್ನು ಮಾಡಿದರೆ, 3 ಮತ್ತು 4 ನೇ ತರಗತಿಯ ವಿದ್ಯಾರ್ಥಿಗಳು ನಗದು ವ್ಯವಹಾರವನ್ನು ಮಾಡಿ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಂಡಿರುತ್ತಾರೆ. ಈ ಮೇಳವು ಹೊರಗಡೆ ನಡೆಯುವ ಯಾವುದೇ ವಾಣಿಜ್ಯ ವ್ಯವಹಾರಕ್ಕಿಂತಲೂ ಕಡಿಮೆ ಇಲ್ಲದಂತೆ ನಡೆದಿರುವುದು ವಿಶೇಷವಾಗಿದೆ. ಶಕ್ತಿ ರೆಸಿಡೆನ್ಶಿಯಲ್ ಶಾಲೆಯು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಈ ತರಹದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರರು ಹಾಗೂ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲರು ಎಲ್ಲಾ 60 ಸ್ಟಾಲ್‌ಗಳಿಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಈ ಶಕ್ತಿ ಮೇಳವನ್ನು ಆಯೋಜಿಸಲು 3 ನೇ ತರಗತಿಯಿಂದ 7ನೇ ತರಗತಿವರೆಗಿನ ತರಗತಿ ಶಿಕ್ಷಕರಾದ ಪ್ರಶಾಂತ್, ಚೇತನ ತಲಪಾಡಿ, ಸಹನ, ಭವ್ಯಶ್ರೀ, ಆಶಾ, ಆನೆಟ್, ಗೀತಾಲಕ್ಷ್ಮೀ, ಸುನಿತ, ರಮ್ಯ, ಸುಪ್ರಿಯ, ಪ್ರೇಮಲತಾ, ಕೀರ್ತನ ಮತ್ತು ಇತರ ಶಿಕ್ಷಕೇತರರು ಮಾರ್ಗದರ್ಶನ ನೀಡಿದರು.

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

  Mrs. Babitha Suraj Principal Mrs. Sushma Satish Coordinator –...