Call Us :
+91 96860 00046
CBSE

Shakthi Education Trust

+91 9108043552
info@shakthi.edu.in

ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ರಜಾಕಾಲದ ಶಿಬಿರಗಳು ಪೂರಕ – ದೇವಾನಂದ ಪೈ

ಶಕ್ತಿನಗರ : ಮಂಗಳೂರಿನ ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡ ಶಕ್ತಿ ಕ್ಯಾನ್‌ಕ್ರಿಯೇಟ್- 2019 ರಜಾಕಾಲದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಬೆಸೆಂಟ್ ಮಹಿಳೆಯರ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ಕೆ. ದೇವಾನಂದ ಪೈ ಅವರು ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರಗೆಳೆದು ಅವರ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವಂತಾಗಲು ರಜಾಕಾಲದ ಶಿಬಿರಗಳು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ನುಡಿದರು. ಮಕ್ಕಳಲ್ಲಿ ಅಪಾರವಾದ ಪ್ರತಿಭೆ ಹಾಗು ಕೌಶಲ್ಯಗಳು ಹುದುಗಿರುತ್ತವೆ, ಇವುಗಳ ಸಮರ್ಥ ನಿರ್ವಹಣೆಗಾಗಿ ಇಂತಹ ಚಟುವಟಿಕೆಗಳು ಬಹಳ ಅಗತ್ಯ, ವಿದ್ಯಾರ್ಥಿಗಳು ತಮ್ಮ ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಇವು ಸಹಕರಿಸುತ್ತವೆ ಎಂದರು.

ಒಂದು ಅತ್ಯುತ್ತಮ ಕಾರ್ಯಚಟುವಟಿಕೆಗಳನ್ನು ಒಳಗೊಂಡ ಪರಿಪೂರ್ಣ ಶಿಬಿರವನ್ನು ಹಮ್ಮಿಕೊಂಡ ಶಕ್ತಿ ಎಜ್ಯುಕೇಶನ್‌ ಟ್ರಸ್ಟ್‌ನ್ನು ಅವರು ಅಭಿನಂದಿಸಿದರು. ಜಾನಪದ ವಿದ್ವಾಂಸ ಶ್ರೀ ರಮೇಶ್‌ ಕಲ್ಮಾಡಿ ಅತಿಥಿಯಾಗಿ ಭಾಗವಹಿಸಿದ್ದರು. ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಬರಿಯ ಅಂಕಗಳಿಗೆ ಪ್ರಾಶಸ್ತ್ಯ ನೀಡದೆ ಪಠ್ಯೇತರ ಚಟುವಟಿಕೆಗಳಿಗೂ ಕೂಡ ಆದ್ಯತೆ ನೀಡಿ ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ, ಕಾರ್ಯತತ್ಪರತೆ, ಗುರುಹಿರಿಯರಲ್ಲಿ ವಿಧೇಯತೆ ಹಾಗೂ ತಮ್ಮ ನೆಲದ ಜನಪದ ಕುಣಿತ ಹಾಗೂ ಹಾಡುಗಳ ಕುರಿತು ಪೂರ್ಣ ಮಾಹಿತಿ ಪಡೆಯುವಂತಾಗಬೇಕು. ನಮ್ಮ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಅವರು ಗೌರವ ಬೆಳೆಸಿಕೊಳ್ಳಬೇಕು ಎಂದು ಕರೆಯಿತ್ತರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ್ ಶ್ರೀ ಕೆ. ಸಿ. ನಾೖಕ್‌  ವಹಿಸಿದ್ದರು. ಶಾಲಾ ಪ್ರಾಚಾರ್ಯೆ ಶ್ರೀಮತಿ ವಿದ್ಯಾ ಕಾಮತ್ ಜಿ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತ ಬಯಸಿದರು. ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್‌ ಅವರು ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ಪೂರ್ಣಿಮ ಅವರು ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಶ್ರೀಮತಿ ಸ್ವಾತಿ ಬಿ. ನಿಡ್ಪಳ್ಳಿ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಪ್ರಿಯಾಂಕ ರೈ ವಂದಿಸಿದರು. ಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾೖಕ್‌, ಟ್ರಸ್ಟೀ ಡಾ. ಮುರಳೀಧರ್ ನಾೖಕ್‌ , ಶ್ರೀಮತಿ ಸಗುಣ ಸಿ. ನಾೖಕ್‌, ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ. ಎಸ್., ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ., ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀಂ ಬಾನು ಉಪಸ್ಥಿತರಿದ್ದರು.

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

  Mrs. Babitha Suraj Principal MSc, B.Ed 25 Years’ Experience...