“A ship is always safe at the shore but that is not what it is built for”.
Keeping in mind the above mentioned momentous thought and the present influence of the pandemic, the School slowly started showing signs of being occupied by the ones prepared.
The Vidyagama programme in a revised format began with classes scheduled on campus on the New Year Day of 2021.It is indeed a known fact thatVidyagama has been an effective tool, with positive feedback from teachers and parents. Shakthi routed this programme in a very unique way. The campus was decorated in a Gurukula manner and the day began with the lighting of the lamp by the Administrator, Dr. K.C.Naik and Saraswathi Vandana followed by floral tribute to the trio-Saraswathi, Omkara and Bharath Mata.
Speaking on this occasion our Administrator said that “The highest education is that which does not merely give us information but also makes our life in harmony with all existence, guiding us to face new challenges and preparing us physically and mentally to shoulder responsibilities boldly. Let this New Year bring new hopes, good health, and success and provide mind-set to reach goals to both the students and staff he wished. The New Education Policy will create a new atmosphere for learning in 2021 he opined.
Vidya Kamath, Principal of Shakthi Residential School shared her happiness at the sight of the arrival of students that kept longing for 10months. Students were asked to follow the protocols designed by the Ministry of Education and to report any form of illness immediately.
Students are allowed to come to schools for half a day with parental consent. Following Covid-19 guidelines including wearing a mask, sanitising hands frequently, and being subjected to thermal scanning is mandatory.Any student with fever, cough, cold and other symptoms of Covid-19 will not be allowed. The School is SAFE she claimed with all etiquettes in place.
Chief Advisor Ramesh K, Prakyath Rai, Institute Development Officer, Sudheer M.K. Principal in-charge, Neema Saxena, Co-ordinator, SGK Pre-School, all Staff and many parents were a witness to the gala opening of the School.
ಶಕ್ತಿ ವಸತಿ ಶಾಲೆಯಲ್ಲಿ 6-9 ನೇ ತರಗತಿಯ ವಿದ್ಯಾರ್ಥಿಗಳ ಶಾಲೆ ಪುನರಾರಂಭ
ಸರಕಾರದ ಆದೇಶದಂತೆ 2021 ರ ಹೊಸ ವರುಷದ ಮೊದಲ ದಿನವೇ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಶಾಲೆಯನ್ನು ಪ್ರಾರಂಭಿಸಲಾಯಿತು. ಪ್ರಸ್ತುತ ದಿನದ ಸಮಸ್ಯೆಯಿಂದ ಶಾಲೆಯಲ್ಲಿ ಶಿಕ್ಷಣದ ಸೌಲಭ್ಯದಿಂದ ವಂಚಿತರಾಗಿರುವ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಕರು ಮತ್ತು ಪೋಷಕರ ಅಭಿಪ್ರಾಯದ ಹಿನ್ನಲೆಯಲ್ಲಿ ಸರಕಾರವು ವಿದ್ಯಾಗಮ ಕಾರ್ಯಕ್ರಮಕ್ಕೆ ಒಪ್ಪಿಗೆಯನ್ನು ಸೂಚಿಸಿತು. ಅದೇ ಪ್ರಕಾರವಾಗಿ ರಾಜ್ಯದಾದ್ಯಂತ ಎಲ್ಲಾ ಶಾಲೆಗಳು ಇಂದೇ ಶಾಲಾ ಪುನರಾರಂಭಕ್ಕೆ ನಿರ್ಧರಿಸಿತ್ತು.
ಈ ನಿಟ್ಟಿನಲ್ಲಿ ಶಕ್ತಿ ವಿದ್ಯಾಸಂಸ್ಥೆಯು ಈ ವಿದ್ಯಾಗಮ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಬರಮಾಡಲು ವಿಶೇಷ ಸಿದ್ಧತೆಗಳೊಂದಿಗೆ ತಯಾರಾಗಿತ್ತು. ಶಾಲಾ ಆವರಣವನ್ನು ಗುರುಕುಲ ಮಾದರಿಯಲ್ಲಿ ಸಿದ್ಧಗೊಳಿಸಿತ್ತು. ಸಂಸ್ಥೆಯ ಆಡಳಿತಾಧಿಕಾರಿಯಾದ ಡಾ. ಕೆ. ಸಿ. ನಾೖಕ್ ದೀಪ ಬೆಳಗಿಸಿದರು ನಂತರ ಸರಸ್ವತಿ ವಂದನೆ, ಓಂಕಾರ ಮಂತ್ರ, ಶ್ಲೋಕ ಹಾಗೂ ವಂದೇ ಮಾತರಂ ಹಾಡಿನ ಮೂಲಕ ಸಾಮಾಜಿಕ ಅಂತರದೊಂದಿಗೆ ಶಾಲಾ ಸಭೆಯನ್ನು ಏರ್ಪಡಿಸಲಾಯಿತು.
ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ. ಸಿ. ನಾೖಕ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಿಕ್ಷಣ ಎಂದರೆ ಕೇವಲ ಜ್ಞಾನಾರ್ಜನೆ ಅಲ್ಲ, ವಿದ್ಯಾರ್ಥಿಗಳಿಗೆ ತಮ್ಮ ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸಲು ಮಾನಸಿಕ ಹಾಗೂ ದೈಹಿಕ ಸಿದ್ಧತೆಯನ್ನು ಮಾಡುವುದು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಜವಾಬ್ದಾರಿಯನ್ನು ನಿಭಾಯಿಸುವ ಧೈರ್ಯ, ಸಾಮರ್ಥ್ಯವನ್ನು ಹೊಂದಬೇಕು. ಹೊಸ ವರುಷವು ಎಲ್ಲರಿಗೂ ಉತ್ತಮ ಆರೋಗ್ಯ, ಯಶಸ್ಸು, ಗುರಿ ಸಾಧನೆಯ ಮನೋಭಾವನೆ ಹಾಗೂ ಹೊಸತನವನ್ನು ಮೂಡಿಸಲಿ ಎಂದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಹೊಸ ವರುಷದ ಶುಭಾಶಯ ಕೋರಿದರು.
ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆಯಾದ ವಿದ್ಯಾ ಕಾಮತ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸುಮಾರು ಹತ್ತು ತಿಂಗಳುಗಳಿಂದ ಮೌನವಾಗಿದ್ದ ಶಾಲೆಯಲ್ಲಿ ಇಂದು ಸಂಭ್ರಮ ಮನೆ ಮಾಡಿದೆ. ಸರಕಾರ, ಶಾಲೆಹಾಗೂ ಶಿಕ್ಷಕರು ಮತ್ತೊಮ್ಮೆ ನಿಮ್ಮನ್ನು ಶಾಲೆಯ ವಾತಾವರಣಕ್ಕೆ ಕರೆ ತರಲು ಮುಂದಾಗಿದ್ದಾರೆ ಹಾಗೂ ವಿದ್ಯಾರ್ಥಿಗಳೂ ನಿಧಾನವಾಗಿ ದೈಹಿಕ ಹಾಗೂ ಮಾನಸಿಕ ಸಿದ್ಧತೆಗಳೊಂದಿಗೆ ನಿತ್ಯವೂ ಶಾಲೆಗೆ ಬರಲು ಉತ್ಸುಕರಾಗಬೇಕು. ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಚಿಸಲ್ಪಟ್ಟ ನಿಯಾಮಾವಳಿಗಳನ್ನು ಪಾಲಿಸಬೇಕೆಂದೂ, ಯಾವುದೇ ಅನಾರೋಗ್ಯದ ಸೂಚನೆಗಳು ಕಂಡು ಬಂದಲ್ಲಿ ಶಿಕ್ಷಕರ ಗಮನಕ್ಕೆ ತರಬೇಕೆಂದು ತಿಳಿಸಿದರು.
ವಿದ್ಯಾಗಮ ನಿಯಮದಂತೆ ಪೋಷಕರ ಒಪ್ಪಿಗೆಯ ಮೇರೆಗೆ ವಿದ್ಯಾರ್ಥಿಗಳಿಗೆ ಅರ್ಧ ದಿನದ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಕೋವಿಡ್ ೧೯ರ ಮಾರ್ಗಸೂಚಿಗಳು, ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್ ಧರಿಸುವುದು, ಆಗಾಗ ಕೈಗಳ ಸ್ವಚತೆಗಳ ಬಗ್ಗೆ ಅರಿವು ಮೂಡಿಸಲಾಯಿತು. ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಾಲೆಯು ಆರೋಗ್ಯ ಮತ್ತು ಭವಿಷ್ಯದ ದೃಷ್ಟಿಯಿಂದ ಸುರಕ್ಷಿತ ಎನ್ನುವುದನ್ನು ಮನದಟ್ಟು ಮಾಡಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ., ಶಾಲಾ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಸುಧೀರ್ ಎಮ್. ಕೆ. ಶಕ್ತಿ ಪೂರ್ವ ಶಾಲೆಯ ಸಹ ಸಂಯೋಜಕಿ ನೀಮಾ ಸಕ್ಸೇನಾ ಹಾಗೂ ಸಂಸ್ಥೆಯ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಶಾಲಾ ಪುನರಾರಂಭದ ಸಂಭ್ರಮಕ್ಕೆ ಪ್ರತ್ಯಕ್ಷ ಸಾಕ್ಷಿಗಳಾದರು.