Call Us :
+91 96860 00046
CBSE

Shakthi Education Trust

+91 9108043552
info@shakthi.edu.in

Press Meet : Shakthi Advanced Learning [SAL]

Briefed by Sri Sanjith Naik Correspondent Shakthi Residential School and Sri Darshan Raj C. J the Coordinator of SAL.

Shakthi Advanced Learning [SAL] is a foundation course specially designed for students of grades 6 – 10, to train them to participate in competitive exams in addition to their regular school curriculum.

SHAKTHI ADVANCED LEARNING (SAL) offers courses for Grade 6 to 10 students. This programme allows students to get prepared for various National, State Level Competitive Exams and Olympiads. It nurtures originality, scientific thinking, and competitive aptitude in the students by means of classroom programs. Workshops will be conducted by experienced subject experts from our PU College. This is a multidisciplinary programme with a practical approach of teaching.

SAL learning approach guarantees the improvement of students of grades 6 to 10 in their school exams, Boards, NTSE and several national/international Olympiad exams. This programme also develops language and soft skills. 

SAL lays the foundation for NEET and JEE preparation. It will be immensely helpful in making their career choices.
SAL courses have been specially designed to learn Board as well as advanced topics as per student’s age and class level without any extra burden. SAL progressively transforms a student’s learning from foundation to excellence level and ensures a concrete conceptual base which helps the students emerge successful in formal school academics and competitive examinations. Periodic tests will be conducted and progress will be assessed. This program evaluates the understanding of students’ learning and gives microscopic feedback to the students on areas or subjects which need to be worked upon and improved upon.

Our experts work towards utilizing the complete capability of our students. Experienced PUC faculty prepares study materials, conducts periodic tests and creates a sound academic development for our 6 to 10 grade students. Their multidimensional development is also taken care of via regular workshops, national/international academic events and career guidance.

This initiative helps students with hidden talents to unfurl their potential and compete with the best.

SAL brings positive changes in the personality of students.

SAL was introduced in Shakthi school in the last academic year (2019-20) and this program was inaugurated by Prof. P. Subrahmanya Yadapadithaya, Vice- Chancellor of Mangalore University and presided over by Dr. N. Vinaya Hegde, Chancellor of Nitte (deemed to be) University.

Ramesh k Chief Advisor Shakthi Education Trust, Prabhakara G.S the Principal Shakthi P.U College, Vidya G. Kamath Principal Shakthi Residential School were present at the Press Meet.

ಪತ್ರಿಕಾಗೋಷ್ಠಿ

ದಿನಾಂಕ 9-7-2020 ರಂದು ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಸಂಚಾಲಕರಾದ ಶ್ರೀ ಸಂಜೀತ್ ನಾಕ್ ಮತ್ತು SAL ನ ಸಂಚಾಲಕರಾದ ಡಾ. ದರ್ಶನ್‌ರಾಜ್ ಸಿ.ಜೆ. ನಡೆಸಿರುವ ಪತ್ರಿಕಾಗೋಷ್ಠಿಯ ವಿವರ.

ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯು ಶಕ್ತಿ ಅಡ್ವಾನ್ಸ್ ಲರ್ನಿಂಗ್[ಎಸ್‌ಎಎಲ್]ನ್ನು 6ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಿರುವ ಫೌಂಡೇಶನ್‌ ಕೋರ್ಸ್‌ನಾಗಿ ಆರಂಭಿಸಿದೆ. ಇದು ಸಿಬಿಎಸ್‌ಇ ಪಠ್ಯಕ್ರಮದ ಜೊತೆಗೆ ಹೆಚ್ಚುವರಿಉಚಿತತರಬೇತಿಯಾಗಿದೆ. ಈ ಮೂಲಕ ಸ್ವರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಸಿದ್ಧಗೊಳಿಸುವ ವಿನೂತನ ಪ್ರಯೋಗದ ತರಬೇತಿ ಆಗಿದೆ.’

ಶಕ್ತಿ ಎಡ್ವಾನ್ಸ್ಡ್ ಲರ್ನಿಂಗ್ [ಎಸ್‌ಎಎಲ್] 6, 7, 8, 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ತರಬೇತಿಯಾಗಿದೆ. ಈ ತರಬೇತಿಯು ವಿದ್ಯಾರ್ಥಿಗಳಿಗೆ ವಿವಿಧ ರಾಷ್ಟ್ರೀಯ, ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಓಲಿಂಪಿಯಾಡ್‌ಗಳಿಗೆ ತಯಾರಾಗಲು ಅನುಕೂಲವಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಅಡಗಿರುವ ಸ್ವಯಂ ಪ್ರತಿಭೆ, ವೈಜ್ಞಾನಿಕ ಚಿಂತನೆ ಮತ್ತು ಸ್ವರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುತ್ತದೆ. ನಮ್ಮ ಪಪೂ ಕಾಲೇಜಿನ ಅನುಭವಿ ವಿಷಯತಜ್ಞರಿಂದ ಕಾರ್ಯಾಗಾರಗಳನ್ನು ಹಾಗೂ ತರಬೇತಿಯನ್ನು ನೀಡಲಾಗುತ್ತದೆ. ಇದು ಭೋಧನೆಯಜೊತೆ ಪ್ರಯೋಗಿಕ ವಿಧಾನವನ್ನು ಹೊಂದಿರುವ ವಿಶೇಷ ಕಾರ್ಯಕ್ರಮವಾಗಿದೆ.

ಎಸ್‌ಎಎಲ್‌ನ ತರಬೇತಿಯು 6 ರಿಂದ 10 ನೇ ತರಗತಿಯ ವರೆಗಿನ ಪರೀಕ್ಷೆಯಲ್ಲಿ ಹೆಚ್ಚಿನ ದರ್ಜೆಯಲ್ಲಿ ತೇರ್ಗಡೆಯಾಗಲು, ರಾಷ್ಟ್ರೀಯ ಮಂಡಳಿ, ಎನ್ ಟಿ ಎಸ್ ಇ ಮತ್ತು ಇತರೆ ರಾಷ್ಟೀಯ/ಅಂತರಾಷ್ಟ್ರೀಯ ಓಲಿಂಪಿಯಾಡ್‌ ಪರೀಕ್ಷೆಗಳಲ್ಲಿ ಸಾಧನೆ ಮಾಡಲು ಅನುಕೂಲವಾಗಲಿದೆ. ಇದು ವಿದ್ಯಾರ್ಥಿಯ ಭಾಷಾ ಪ್ರಾವಿಣ್ಯತೆ ಮತ್ತು ಇತರೆ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಲು ಸಹಕಾರಿಯಾಗಲಿದೆ. ಎಸ್‌ಎಎಲ್, ನೀಟ್ ಮತ್ತು ಜೆಇಇ ತಯಾರಿಗೆ ಅಡಿಪಾಯ ಹಾಕುತ್ತದೆ. ಸಣ್ಣ ವಯಸ್ಸಿನಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಭವಿಷ್ಯ ಹಾಗೂ ವೃತ್ತಿಜೀವನವನ್ನು ಆಯ್ಕೆ ಮಾಡಲು ಸಹಕಾರಿಯಾಗಲಿದೆ.

ಎಸ್‌ಎಎಲ್‌ ಯಾವುದೇ ಹೆಚ್ಚುವರಿ ಹೊರೆಯಿಲ್ಲದೆ ವಿದ್ಯಾರ್ಥಿಗಳ ಗ್ರಹಣ ಮಟ್ಟ ಹಾಗೂ ತರಗತಿಗಳ ಮಟ್ಟಕ್ಕೆ ಅನುಗುಣವಾಗಿ ಬೋರ್ಡ್ ಮತ್ತು ಸುಧಾರಿತ ವಿಷಯಗಳನ್ನು ಕಲಿಯಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ತಳಮಟ್ಟದಿಂದ ಉತ್ಕೃಷ್ಟ ಮಟ್ಟದವರೆಗೆ ಶಾಲಾ ಶಿಕ್ಷಣದಿಂದ ಸ್ವರ್ಧಾತ್ಮಕ ಪರೀಕ್ಷೆಗೆ ತಯಾರು ಮಾಡಲು ಉಪಯುಕ್ತವಾಗಲಿದೆ. ವಿದ್ಯಾರ್ಥಿಗಳಿಗೆ ಪುನರ್ ಮನನದ ಜೊತೆ ಆವರ್ತಕ ಪರೀಕ್ಷೆಯನ್ನು ನಡೆಸಿ ವಿದ್ಯಾರ್ಥಿಯ ವಿಕಾಸವನ್ನು ನಿರ್ವಹಿಸಲಾಗುತ್ತದೆ.

ಈ ಮೂಲಕ ವಿದ್ಯಾರ್ಥಿಗಳ ಕಲಿಕೆಯ ತಿಳಿವಳಿಕೆಯನ್ನು ಮೌಲ್ಯಮಾಪನ ಮಾಡಿ ಅವರು ತಲುಪಬೇಕಾದ ದಾರಿ ಹಾಗೂ ವಿಷಯಗಳ ಕುರಿತಂತೆ ಮನವರಿಕೆ ಮಾಡಲಾಗುವುದು.

ನಮ್ಮ ವಿದ್ಯಾರ್ಥಿಗಳಿಗೆ ಅನುಭವಿ ಪಪೂ ಉಪನ್ಯಾಸಕರು ಅಧ್ಯಯನ ಸಾಮಗ್ರಿಗಳನ್ನು ಸಿದ್ಧಪಡಿಸಿರುತ್ತಾರೆ, ಇವರೆಆವರ್ತಕ ಪರೀಕ್ಷೆಗಳನ್ನು ನಡೆಸುವುದರ ಜೊತೆಗೆ 6 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣವನ್ನೂ ಸೃಷ್ಠಿಸುತ್ತಾರೆ.

ವಿದ್ಯಾರ್ಥಿಗಳ ಜ್ಞಾನವನ್ನು ವೃದ್ಧಿಸುವ ಜೊತೆಗೆ ನಿರಂತರ ಕಾರ್ಯಾಗಾರಗಳು ರಾಷ್ಟ್ರೀಯ/ಅಂತರಾಷ್ಟ್ರೀಯ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನವನ್ನು ಕೊಡುವುದರ ಮೂಲಕ ಸ್ವರ್ಧಾತ್ಮಕ ಪರೀಕ್ಷೆಗೆ ಸಿದ್ದಗೊಳಿಸುತ್ತಾರೆ.

ಈ ವಿಧಾನದಿಂದ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಿ ಅವರ ಸಾಮರ್ಥ್ಯವನ್ನು ಗುರುತಿಸುತ್ತೇವೆ. ಈ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವುದರಲ್ಲಿ ಸಹಕರಿಯಾಗುತ್ತದೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ (2019-20)ರಲ್ಲಿ ಶಕ್ತಿ ಶಾಲೆಯಲ್ಲಿ ಎಸ್‌ಎಎಲ್‌ನ್ನು ಪ್ರಾರಂಭಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಉದ್ಘಾಟಿಸಿದರು. ನಿಟ್ಟೆಡಿಮ್ಡ್ ವಿವಿಯ ಕುಲಾಧಿಪತಿ ಡಾ. ಎನ್ ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದರು.

ಈಗಾಗಲೇ ವಿದ್ಯಾರ್ಥಿಗಳಿಗೆ ನೇರ ತರಗತಿ ಹಾಗೂ ಆನ್‌ಲೈನ್‌ ತರಗತಿಯನ್ನು ನಡೆಸಿ ಕೊಡಲಾಗುತ್ತಿದೆ.

ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ವಿಶೇಷತೆ
ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಈ ಜಿಲ್ಲೆಯ ಮತ್ತು ಅಂತರ್‌ಜಿಲ್ಲೆಯ ವಿದ್ಯಾರ್ಥಿಗಳು ಇದ್ದಾರೆ. ಇವರಿಗೆ ಅನುಕೂಲವಾಗುವ ದೃಷ್ಠಿಯನ್ನು ಇಟ್ಟುಕೊಂಡು ಬೋರ್ಡ್‌ನ ತರಗತಿ ಮುಗಿದ ನಂತರ ಈ ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಇದಕ್ಕೆ ಈಗಾಗಲೇ ಅನೇಕ ಪೋಷಕರು ಆಸಕ್ತಿಯನ್ನು ತೋರಿಸಿರುತ್ತಾರೆ. ಇದು ಯಶಸ್ವಿಗೊಳ್ಳಲು ನಿಮ್ಮೆಲ್ಲರ ಸಹಕಾರವು ಅತ್ಯವಶ್ಯಕವಾಗಿವುದರಿಂದ ಇದಕ್ಕೆ ಹೆಚ್ಚಿನ ಪ್ರಚಾರ ನೀಡಬೇಕಾಗಿ ತಮ್ಮಲ್ಲಿ ವಿನಯಪೂರ್ವಕ ವಿನಂತಿ.

ಈ ಸಂದರ್ಭದಲ್ಲಿ ಶಕ್ತಿ ಎಡ್ವಾನ್ಸ್ಡ್ ಲರ್ನಿಂಗ್‌ನ ಪುಸ್ತಕವನ್ನು ಶಾಲೆಯ ಸಂಚಾಲಕರಾದ ಸಂಜೀತ್ ನಾಕ್ ಬಿಡುಗಡೆಗೊಳಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಶಕ್ತಿ ಎಜ್ಯುಕೇಶನ್‌ಟ್ರಸ್ಟ್‌ನ ಪ್ರಧಾನ ಸಲಹೆಗಾರ ರಮೇಶ್ ಕೆ, ಪ್ರಭಾಕರ ಜಿ. ಎಸ್ ಪ್ರಾಂಶುಪಾಲರು ಶಕ್ತಿ ಪಪೂ ಕಾಲೇಜು ಮತ್ತು ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಜಿ. ಕಾಮತ್ ಉಪಸ್ಥಿತರಿದ್ದರು.

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

  Mrs. Babitha Suraj Principal Mrs. Sushma Satish Coordinator –...