“Champions don’t give up; they get up!” The little Karate Champs of Shakthi Residential School has made the above quote come true.
Nihal P.K. of Grade 8 has bagged 4 Gold in various forms of Karate, within a span of 15 days. In the JSKA International Karate Championship held in Mangaluru he won Gold in Team Kata and a Bronze in Kumite. In the Inter State Open Karate Tournament organised by the Kamal Martial Arts he bagged 3 Gold in Kata, Kumite and Team Kata consistently.
In the Inter-State Open Karate Tournament Tamim Rumi of Grade 4 won Silver and a Bronze in Kata and Kumite respectively. Chiranth of Grade 8 won Silver in Kumite.
In the 4th National Level Open Karate Championship-KBK Cup 2020 organised by ‘The Champions Hub’ Udupi, Chinmayee Bhat of Grade 8 and SiddiVinayak Bhat of Grade 3 won Silver and Bronze in Kata respectively.
The Management, Principal, Staff, Karate Instructor and the Students congratulated them on their achievements.
ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಗಾದೆ ಮಾತಿನಂತೆ, ಮನುಷ್ಯನಿಗೆ ಅಸಾಧ್ಯವಾದ ಕೆಲಸ ಯಾವುದೂ ಇಲ್ಲ. ಸರಿಯಾದ ಮಾರ್ಗದರ್ಶನದೊಂದಿಗೆ, ಆತ ಪ್ರಾಮಾಣಿಕ ಶ್ರದ್ಧೆಯೊಂದಿಗೆ, ಸತತ ಪರಿಶ್ರಮ, ಛಲ, ನಂಬಿಕೆಯೊಂದಿಗೆ ಆ ಕೆಲಸವನ್ನು ಮಾಡಿದಾಗ ಗುರಿ ಸಾಧಿಸಲು ಸಾಧ್ಯಎನ್ನುವ ಮಾತನ್ನು ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳು ಸಾಬೀತು ಪಡಿಸಿದ್ದಾರೆ.
ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳು ನಗರದ ಹಲವಾರು ಕರಾಟೆ ಟೂರ್ನಮೆಂಟ್ಗಳಲ್ಲಿ ಭಾಗವಹಿಸಿ, ಉತ್ತಮ ಪ್ರದರ್ಶನದೊಂದಿಗೆ ಬಹುಮಾನಗಳನ್ನು ಗಳಿಸಿ, ಶಾಲೆಯ ಕೀರ್ತಿಯನ್ನು ಹೆಚ್ಚಿಸಿದಲ್ಲದೆ, ಹೆತ್ತವರ ಗೌರವವನ್ನೂ ಹೆಚ್ಚಿಸಿದ್ದಾರೆ.
ನಿಹಾಲ್ ಪಿ.ಕೆ ಮಂಗಳೂರಿನಲ್ಲಿ ಜೆ.ಎಸ್.ಕೆ.ಎ. ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ಟೂರ್ನಮೆಂಟ್ನಲ್ಲಿ ಭಾಗವಹಿಸಿ ಟೀಮ್ಕಟಾ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಹಾಗೂ ಕುಮಿಟೆಯಲ್ಲಿ ತೃತೀಯ ಬಹುಮಾನದೊಂದಿಗೆ ಕಂಚಿನ ಪದಕವನ್ನು ಗಳಿಸಿದ್ದಾರೆ. ಕಮಲ್ ಮಾರ್ಷಲ್ ಆರ್ಟ್ ಆಯೋಜಿಸಿದ ಅಂತರ್ರಾಜ್ಯ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ ಇವರು ಕಟಾ, ಕುಮಿಟೆ ಹಾಗೂ ಟೀಮ್ಕಟಾದಲ್ಲಿ ಇವರು 3 ಚಿನ್ನದ ಪದಕವನ್ನು ಗಳಿಸಿದ್ದಾರೆ.
ಕಮಲ್ ಮಾರ್ಷಲ್ ಆರ್ಟ್ ಆಯೋಜಿಸಿದ ಅಂತರ್ ರಾಜ್ಯ ಮುಕ್ತ ಕರಾಟೆಯಲ್ಲಿ ಭಾಗವಹಿಸಿದ ಮತ್ತೊರ್ವ ವಿದ್ಯಾರ್ಥಿ 4ನೇ ತರಗತಿಯ ಥಮೀಮ್ ರೂಮಿಕಟಾ ಮತ್ತು ಕುಮಿಟೆಯಲ್ಲಿ ಉತ್ತಮ ಪ್ರದರ್ಶನ ನೀಡಿ, ದ್ವಿತೀಯ ಹಾಗೂ ತೃತೀಯ ಸ್ಥಾನದೊಂದಿಗೆ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗಳಿಸಿದ್ದಾರೆ.
8ನೇ ತರಗತಿಯ ಚಿರಂತ್ ಕುಮಿಟೆ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕವನ್ನು ಗಳಿಸಿದ್ದಾರೆ. ಉಡುಪಿಯ ’ಡಿ ಚಾಂಪಿಯನ್ ಹಬ್’ – ಆಯೋಜಿಸಿದ 4 ನೇ ವರ್ಷದ ರಾಷ್ಟೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ 2020-ರಲ್ಲಿ ಭಾಗವಹಿಸಿದ 8ನೇ ತರಗತಿಯ ಹಾಗೂ 3 ನೇ ತರಗತಿಯ ವಿನಾಯಕ ಭಟ್ ಭಾಗವಹಿಸಿ ಉತ್ತಮ ಪ್ರದರ್ಶನವನ್ನು ನೀಡಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಕ್ತಿ ವಸತಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.