Leaders are not born but are made by their experiences in life. To inculcate the leadership qualities in students , the Investiture ceremony of Shakthi Residential School was held with great enthusiasm and dignity in the school premises.
The ceremony was presided over by the administrator Dr.K C Naik. The chief guest of the programme was DR Y Bharath Shetty MLA North constituency, Mangaluru.
The School Band students accompanied the dignitaries and the leaders to stage with due respect.
The ceremony commenced with lighting the lamp followed by prayer. The elected leaders were conferred with badges and sashes by honorable Chief guest and other dignitaries. School Head boy Master Sumith Y and Head girl Miss Sakshi Hubbali delivered their acceptance speech. The Active members of different houses such as Agni House, Jal House, Vaayu house and Prithvi House were also the part of the ceremony.
A Motivational song was sung to inspire the young leaders. Mrs Smisha gave an address on the significance of the day.
The student council took the pledge to uphold the school motto in high esteem. Dr Y Bharath Shetty congratulated the leaders and addressed them to be impartial and honest in leadership, unity, discipline and morality . He also motivated them to embrace their responsibilities with utmost compassion and empathy towards everyone. He guided the young leaders to instill the spirit of ‘Service towards soceity Before Self service’. Advised the students to dream big and chase their dreams.
Dr K C Naik administrator appreciated them and advised them to be role models and work for the benefits of the students and country. Mr. Ramesh K, Chief advisor Shakathi Education trust welcomed the gathering. Mr.Venkatesha Murthy H Principal Shakthi PU College was present on the occasion.
The ceremony continued with the felicitation of the chief guest.
Mrs Babitha Suraj Principal Shakthi Residential School congratulated the members of Student Council and advised them to be impartial and honest in discharging their duties. She also extended a supporting hand to the student council for the smooth running of the school. She thanked everyone for their support in making this event a success.
All school staff and students witnessed the programme with joy and excitement.
204-25 ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಉದ್ಘಾಟನಾ ಕಾರ್ಯಕ್ರಮ
ಮಂಗಳೂರು ಜೂ. 29 : ಮಂಗಳೂರಿನ ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ 2024-25 ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಉದ್ಘಾಟನಾ ಕಾರ್ಯಕ್ರಮವನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ವೈ ಭರತ್ ಶೆಟ್ಟಿ ಅವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.
ನಂತರ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಅವರು “ನಾಯಕನಾದವನು ಮುಖ್ಯವಾಗಿ ಪ್ರಾಮಾಣಿಕತೆ, ಶಿಸ್ತು, ನೈತಿಕತೆ ಯಂತಹ ಗುಣಗಳನ್ನು ರೂಢಿಸಿಕೊಂಡು ಯಾವುದೇ ಭೇದಭಾವ ಇಲ್ಲದೆ ಕೆಲಸವನ್ನು ಮಾಡಬೇಕು. ಸ್ವಂತಕ್ಕೆ ಸಲ್ಪ ಸಮಾಜಕ್ಕೆ ಸರ್ವಸ್ವ ಎಂಬಂತೆ ಮೊದಲು ಸಮಸ್ತ ಸಮಾಜದ ಏಳಿಗೆಯನ್ನು ಅರಿತು ಕಾರ್ಯೋನ್ಮುಖರಾಗಬೇಕು. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಕಷ್ಟು ಕನಸುಗಳು ಇರಬೇಕು. ಕನಸು ಕಂಡರೆ ಸಾಲದು ಆ ಕನಸು ನಿಮ್ಮ ನರನಾಡಿಗಳಲ್ಲಿ ಹರಿಯಬೇಕು. ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಆ ಕನಸು ನಿಮ್ಮನ್ನು ಹಿಂಬಾಲಿಸಬೇಕು. ನಮ್ಮ ಮಕ್ಕಳು ಇತಿಹಾಸವನ್ನು ಹುಟ್ಟು ಹಾಕಬೇಕೆಂದು ಹೆತ್ತವರು ಕನಸು ಕಾಣುತ್ತಾರೆ. ಮಕ್ಕಳು ಅವರವರ ಇತಿಹಾಸವನ್ನು ತಿಳಿದು ನಡೆದರೆ ಭವಿಷ್ಯದಲ್ಲಿ ಇತಿಹಾಸವನ್ನು ನಿರ್ಮಿಸಬಹುದು. ದೊಡ್ಡದಾಗಿ ಕನಸು ಕಾಣಿರಿ ಅದರ ಹಿಂದೆ ನಡೆಯಿರಿ. ಈ ವಯಸ್ಸಿನಲ್ಲಿ ಸಾಧಿಸಲಾಗದ್ದು ಯಾವುದು ಇಲ್ಲ. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ನಾವು ನಾಯಕತ್ವದ ಗುಣಗಳನ್ನು ರೂಢಿಸಿಕೊಂಡರೆ ದೇಶದ ಸಮರ್ಥ ಪ್ರಜೆಯಾಗಬಹುದು. ವಿಜ್ಞಾನ ಮುಂದುವರೆಯುತ್ತಿದೆ ಸಾಕಷ್ಟು ತಂತ್ರಜ್ಞಾನ ಬೆಳೆಯುತ್ತಿದೆ. ಮಕ್ಕಳಿಗೆ ಕಲಿಯಲು ಉತ್ತಮ ಅವಕಾಶಗಳಿವೆ, ಅದನ್ನು ಬಳಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳುವಂತಾಗಲಿ” ಎಂದು ಹೇಳುತ್ತಾ ಆಯ್ಕೆಯಾದ ನೂತನ ವಿದ್ಯಾರ್ಥಿ ಸಂಘದ ನಾಯಕರುಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ ಕೆ. ಸಿ. ನಾೖಕ್ ಅವರು ಮಾತನಾಡಿ ಮಕ್ಕಳು ದೇಶದ ಸಂಪತ್ತಾಗಬೇಕು. ನಾಯಕತ್ವ ಗುಣಗಳನ್ನು ರೂಢಿಸಿಕೊಳ್ಳಬೇಕು. ಯಾವುದೇ ಲೋಪದೋಷ ಬರದಂತೆ ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿ ಸಂಘವು ಉತ್ತಮವಾದ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಮತ್ತು ವಿವಿಧ ವಿಭಾಗಗಳಾದ ಅಗ್ನಿ, ವಾಯು, ಜಲ, ಪೃಥ್ವಿ ನಾಮಾಂಕಿತ ದಳಗಳ ಧ್ವಜವನ್ನು ವಿತರಿಸುವ ಮೂಲಕ ನಾಯಕರ ಪದಗ್ರಹಣವು ನಡೆಯಿತು. ವಿದ್ಯಾರ್ಥಿ ನಾಯಕನಾಗಿ ಸುಮಿತ್ ವೈ ಮತ್ತು ವಿದ್ಯಾರ್ಥಿ ನಾಯಕಿಯಾಗಿ ಸಾಕ್ಷಿ ಹುಬ್ಬಳ್ಳಿ ಪದಗ್ರಹಣ ಮಾಡಿ ನಂತರ ಭಾಷಣವನ್ನು ಮಾಡಿದರು.
ವಿದ್ಯಾರ್ಥಿ ಸಂಘದ ನಾಯಕರುಗಳಿಗೆ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ಪ್ರಮಾಣ ವಚನವನ್ನು ಬೋಧಿಸಿದರು ನಂತರ ಶಾಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ಐಕ್ಯತಾ ಗೀತೆಯನ್ನು ಹಾಡಿದರು.
ಶಿಕ್ಷಕಿ ಸ್ಮಿಷಾ ದಿನದ ಪ್ರಾಮುಖ್ಯತೆಯನ್ನು ವಾಚಿಸಿದರು. ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ. ಸರ್ವರನ್ನು ಸ್ವಾಗತಿಸಿದರೆ, ಶಾಲಾ ಪ್ರಾಂಶುಪಾಲೆ ಶ್ರೀಮತಿ ಬಬಿತಾ ಸೂರಜ್ ಅವರು ವಂದನಾರ್ಪಣೆಯನ್ನು ಮಾಡಿದರು. ಶಿಕ್ಷಕಿ ಚೇತನ ತಲಪಾಡಿ ಸಮಾರಂಭವನ್ನು ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭವು ಮುಕ್ತಾಯವಾಯಿತು.