Shakthi Residential School, Shakthinagara in collaboration with Kreeda Bharathi Mangalore, celebrated International Yoga Day on June 21st, 2024, with great enthusiasm at Reshma Memorial auditorium.
Dr. Aishwarya Shetty, Assistant professor Indira Institute Of Health and Science Mangalore raised awareness about the ancient practice and to celebrate the physical and spiritual prowess that yoga has brought to the world. In her speech she addressed how yoga increases memory power in man and how yoga is beneficial to control our thoughts. She also mentioned that yoga is very helpful in increasing mental and physical strength and increases concentration.
Mr.Venkatesha Murthy H Principal, Shakthi Residential College presided over the programme. He said that man has been practicing yogasana has been practicing since 2nd century. In his Presidetial Speech he explained how yoga promotes mental health stability. He advised students to practice yoga for good health and mental stability. All the teaching and non teaching staffs were present in the program.
The children from grade 1 to 10 had their Yoga sessions by Mrs. Subhadra and Veena, the Yoga Instructors of Delampady Yoga Prathishtana. The benefits of the postures were narrated as children performed with the instructions.
Mr.Kariappa Rai, President of Kreeda Bharathi Mangalore delivered the key note address Krishna Shetty Taremar, Secretary of Kreeda Bharathi Mangalore was present in the program. Mr.Ramesh K, chief advisor Shakthi Education Trust welcomed the gathering. Mrs.Babitha Suraj, Principal Shakthi Residential School gave the vote of thanks address. Mr.Sharanappa narrated the programme.
ವಿಶ್ವ ಯೋಗ ದಿನ -2024
ಮಂಗಳೂರು 21 : ಶಕ್ತಿ ವಸತಿ ಶಾಲೆ ಶಕ್ತಿ ನಗರ ಮಂಗಳೂರು ಇಲ್ಲಿನ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಶಕ್ತಿ ವಿದ್ಯಾ ಸಂಸ್ಥೆ ಮತ್ತು ಕ್ರೀಡಾ ಭಾರತಿ ಮಂಗಳೂರು ಇವರ ಸಹಯೋಗದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯನ್ನು ಸಾಮೂಹಿಕವಾಗಿ ವಿವಿಧ ಯೋಗಾಸನಗಳನ್ನು ಮಾಡುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಮನುಷ್ಯನಲ್ಲಿ ಯೋಗವು ಸ್ಮರಣ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ನಮ್ಮ ಆಲೋಚನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಈ ಯೋಗ ಬಹಳ ಪ್ರಯೋಜನಕಾರಿಯಾಗಿದೆ. ಅಷ್ಟೇ ಅಲ್ಲ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿ ಏಕಾಗೃತೆಯನ್ನು ಹೆಚ್ಚಿಸುವಲ್ಲಿ ಯೋಗ ಬಹಳ ಸಹಕಾರಿಯಾಗಿದೆ. ಯೋಗಕ್ಕೆ ಸಾಕಷ್ಟು ವರ್ಷಗಳ ಚರಿತ್ರೆಯಿದ್ದು, ಇಂದು ಇಡೀ ವಿಶ್ವವೇ ಯೋಗವನ್ನು ತನ್ನದಾಗಿಸಿಕೊಂಡು ಅಭ್ಯಾಸ ಮಾಡುತ್ತಿದೆ. ನಾವು ನಮ್ಮ ದಿನನಿತ್ಯದ ಬದುಕಿನಲ್ಲಿ ಈ ಯೋಗಾಸನಗಳನ್ನು ಮಾಡುತ್ತಾ ನಾವೆಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದು ಹೇಳುತ್ತಾ ವಿದ್ಯಾರ್ಥಿಗಳಿಂದ ವಿವಿಧ ಪ್ರಾಣಯಾಮಗಳನ್ನು ಅಭ್ಯಾಸ ಮಾಡಿಸುವ ಮೂಲಕ ಯೋಗಾಸನಗಳ ಮಾಡುವ ಉದ್ದೇಶವನ್ನು ಇಂದಿರಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್ ಮಂಗಳೂರಿನ ಸಹಾಯಕ ಪ್ರಾದ್ಯಾಪಕಿ ಡಾ| ಐಶ್ವರ್ಯ ಶೆಟ್ಟಿ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ವೆಂಕಟೇಶ್ ಮೂರ್ತಿ ಹೆಚ್ ಅವರು ಮಾತನಾಡಿ ಮನುಷ್ಯ ನಾಗರೀಕತೆಯನ್ನು ಕಲಿಯುತ ಹೋದ ಹಾಗೆ ಈ ಯೋಗಾಸನವನ್ನು ರೂಢಿಸಿಕೊಳ್ಳುತ್ತಾ ಬಂದಿದ್ದಾನೆ. ಪತಂಜಲಿ ಯೋಗವು ಮಾನಸಿಕ ಆರೋಗ್ಯದ ಸ್ಥಿರತೆಯನ್ನು ವೃದ್ಧಿಸುತ್ತದೆ. ಮಕ್ಕಳ ಮನಸ್ಸು ಪಠ್ಯಗಳಲ್ಲಿರಬೇಕಾದರೆ ಯೋಗಾಸನ ಬಹಳ ಮುಖ್ಯ. ಉತ್ತಮ ಆರೋಗ್ಯಕ್ಕಾಗಿ ನಾವೆಲ್ಲರೂ ಯೋಗಾಸನವನ್ನು ಅಭ್ಯಾಸ ಮಾಡಬೇಕು. ಇಂದು ಇಡೀ ವಿಶ್ವವೇ ಈ ಯೋಗ ದಿನವನ್ನು ಆಚರಿಸುತ್ತಿದೆ. ಮಕ್ಕಳಿಗೆ ಇದು ಕಲಿಯುವ ಸಮಯ ಆದ್ದರಿಂದ ಪತಂಜಲಿ ಯೋಗವು ತಿಳಿಸಿದ ವಿವಿಧ ಯೋಗಾಸನಗಳನ್ನು ದಿನ ನಿತ್ಯ ಕಲಿಯುತ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.
ನಂತರ ಕ್ರೀಡಾಭಾರತಿ ಮಂಗಳೂರು ಇದರ ಪದಾಧಿಕಾರಿಗಳಾದ ಸುಭದ್ರಾ ಮತ್ತು ವೀಣಾ ಅವರಿಂದ ಮಕ್ಕಳಿಗೆ ಸಾಮೂಹಿಕವಾಗಿ ಯೋಗ ತರಬೇತಿ ನಡೆಯಿತು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಕ್ರೀಡಾಭಾರತಿ ಮಂಗಳೂರು ಇದರ ಕಾರ್ಯದರ್ಶಿಗಳಾದ ಕೃಷ್ಣ ಶೆಟ್ಟಿ ತಾರೆಮಾರ್, ಯೋಗ ತರಬೇತುದಾರರಾದ ಸುಭದ್ರಾ ಮತ್ತು ವೀಣಾ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಕ್ರೀಡಾ ಭಾರತಿ ಮಂಗಳೂರು ಇದರ ಅಧ್ಯಕ್ಷರಾದ ಕರಿಯಪ್ಪ ರೈ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು, ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ ಅವರು ಸ್ವಾಗತಿಸಿದರು, ಶಕ್ತಿ ವಸತಿ ಶಾಲಾ ಪ್ರಾಂಶುಪಾಲೆ ಶ್ರೀಮತಿ ಬಬಿತಾ ಸೂರಜ್ ವಂದನಾರ್ಪಣೆಯನ್ನು ಮಾಡಿದರು. ನಿರೂಪಣೆಯನ್ನು ಕನ್ನಡ ಅಧ್ಯಾಪಕರಾದ ಶರಣಪ್ಪ ಅವರು ನೆರವೇರಿಸಿದರು.