Call Us :
+91 96860 00046
CBSE

Shakthi Education Trust

+91 9108043552
info@shakthi.edu.in

ಮಾನವನಿಗೆ ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿ ಬಹುಮುಖ್ಯ – ಕೆ. ಬಾಲಕೃಷ್ಣ ಭಟ್

ಮಂಗಳೂರು: ಇಲ್ಲಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪಿ.ಯು ಕಾಲೇಜಿನ ಜಂಟಿ ಆಶ್ರಯದಲ್ಲಿ ಇಂದು ಬೆಳಗ್ಗೆ ನಡೆದ ಜಿಲ್ಲಾ ಮಟ್ಟದ ಅಂತರಶಾಲಾ ಶ್ರೀ ಕೃಷ್ಣ ಜನ್ಮಾಷ್ಠಮಿಯ ನಿಮಿತ್ತದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ವಿಧಾನ ಪರಿಷತ್‌ನ ಮಾಜಿ ಸದಸ್ಯರಾದ ಶ್ರೀ ಕೆ ಬಾಲಕೃಷ್ಣ ಭಟ್ ನೆರೆವೇರಿಸಿದರು. ಉದ್ಘಾಟಿಸಿದ ನಂತರ ಮಾತನಾಡಿದ ಅವರು ರಾಮಾಯಣ, ಮಹಾಭಾರತವನ್ನು ವಿದೇಶಿಗರು ನಮಗಿಂತ ಹೆಚ್ಚು ತಿಳಿದುಕೊಂಡಿರುತ್ತಾರೆ. ವಿದೇಶಕ್ಕೆ ನಮ್ಮ ದೇಶದ ಯಾವುದೇ ವ್ಯಕ್ತಿಯು ಹೋದಾಗ ಅವರು ಭಾರತದ ಸಂಸ್ಕೃತಿ ಮಹಾಗ್ರಂಥಗಳ ಕುರಿತಂತೆ ಆ ವ್ಯಕ್ತಿಯಿಂದ ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳಲು ಇಚ್ಛೆ ಪಡುತ್ತಾರೆ ಎಂದು ಹೇಳಿದರು. ನಾವು ನಮಗೆ ತಿಳಿದಿರುವ ಯಾವುದೇ ಭಾಷೆಯಲ್ಲಿಯಾದರು ರಾಮಾಯಣ, ಮಹಾಭಾರತ ಮತ್ತು ಭಗವತ್‌ಗೀತೆಯ ಕುರಿತಂತೆ ಅಧ್ಯಯನ ಮಾಡುವ ಗುಣವನ್ನು ಬೆಳೆಸಬೇಕೆಂದು ಕರೆ ನೀಡಿದರು. ಕೃಷ್ಣ ಮತ್ತು ರಾಮನ ಜೀವನದ ಅಧ್ಯಯನದ ಮೂಲಕ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ರೂಡಿಸಿಕೊಳ್ಳಲು ಸಾಧ್ಯವೆಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತಾಧಿಕಾರಿ ಶ್ರೀ ಕೃಷ್ಣ ಕುಮಾರ್ ಮಾತನಾಡಿ ಶ್ರೀ ಕೃಷ್ಣನಿಂದ ಪ್ರೇರಣೆ ಪಡೆಯುವುದರಿಂದ ನಮ್ಮ ಜೀವನದಲ್ಲಿ ಸುಧಾರಣೆ ತರಬಹುದೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಸಿ  ನಾೖಕ್‌  ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ಸಂಸ್ಕಾರವನ್ನು ಪಡೆಯಬೇಕು. ಇದಕ್ಕೋಸ್ಕರ ಶ್ರೀ ಕೃಷ್ಣ ವಾಣಿಯನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬನಲ್ಲಿಯೂ ಶ್ರೀ ಕೃಷ್ಣನನ್ನು ಕಾಣಬೇಕು. ಶ್ರೀ ಕೃಷ್ಣ ಜನ್ಮಾಷ್ಠಮಿಯ ನಿಮಿತ್ತ ಏರ್ಪಡಿಸಿರುವ ವಿವಿಧ ಸ್ಪರ್ಧೆಗಳು ಯಶಸ್ವಿಯಾಗಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಶಕ್ತಿ ವಸತಿ ಶಾಲೆ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ ಮಾತನಾಡಿದರು. ವೇದಿಕೆಯಲ್ಲಿ ಶಕ್ತಿ ಎಜ್ಯುಕೇಶನ್‌ ಟ್ರಸ್ಟ್‌ನ ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಪ ಪೂ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ.ಎಸ್, ಗೋಪಾಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ನಿರೂಪಣೆಯನ್ನು ಶ್ರೀಮತಿ ಪ್ರಿಯಾಂಕ ರೈ ಇವರು ಹಾಗೂ ಧನ್ಯವಾದವನ್ನು ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು ನೆರೆವೇರಿಸಿದರು.

Shree Krishna Janmotsava Competitions in Shakthinagar

Shree Gopalakrishna Temple Shakthinagar will be conducting Shree Krishna Janmotsava Competitions on 17th Aug, in co-ordination with Shakthi Residential School and Shakthi P.U.College. The competitions will start at 9:30 am and will be inaugurated by Sri Balakrishna Bhat K, the Ex-MLC. The programme will be presided over by Sri K.C Naik, the Managing Trustee of Shree Gopalakrishna Temple. Muddu Krishna (0-3yrs), Benne Krishna(4-5yrs), Yashoda Krishna (I – IV Std), Dasara Keerthanegalu (V – VII Std) group, Gopika Krishna – Group dance (VIII- X Std) 9 members, Geetha Kantapatha ( I – X Std), Drawing Competition (VI – X) and Samskrita Competitions will be held. Spot Entries will be entertained.

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

  Mrs. Babitha Suraj Principal Mrs. Sushma Satish Coordinator –...