Call Us :
+91 96860 00046
CBSE

Shakthi Education Trust

+91 9108043552
info@shakthi.edu.in

ರಾಜ್ಯ ಮಟ್ಟದ ಮಕ್ಕಳ ದಿನಾಚರಣೆ ಚಿತ್ರಕಲಾ ಸ್ಪರ್ಧೆ 2025

ಕನ್ನಡ ಪ್ರಭ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್ ಆಯೋಜಿಸುತ್ತಿರುವ

ರಾಜ್ಯ ಮಟ್ಟದ ಮಕ್ಕಳ ದಿನಾಚರಣೆ ಚಿತ್ರಕಲಾ ಸ್ಪರ್ಧೆ 2025

ವಿಷಯ : ಕರ್ನಾಟಕದ ಅರಣ್ಯ ಅಥವಾ ಕರ್ನಾಟಕದ ವನ್ಯಜೀವಿ (ವರ್ಣಚಿತ್ರ ಸ್ಪರ್ಧೆ)

Click to Register

1. ಚಿತ್ರಕಲಾ ಸ್ಪರ್ಧೆ ಕುರಿತು

ರಾಜ್ಯ ಮಟ್ಟದ ಮಕ್ಕಳ ದಿನಾಚರಣೆ ಚಿತ್ರಕಲಾ ಸ್ಪರ್ಧೆ 2025 ಎಂಬುದು ಕರ್ನಾಟಕದಾದ್ಯಂತ ಇರುವ ಶಾಲಾ ಮಕ್ಕಳ, ಯುವ ಕಲಾಕಾರರ ಸೃಜನಶೀಲ ಪ್ರತಿಭೆಯನ್ನು ಕಂಡುಹಿಡಿಯುವ ಮತ್ತು ಪ್ರೋತ್ಸಾಹಿಸುವ ಉದ್ದೇಶ ಹೊಂದಿರುವ ಒಂದು ವಿಶಿಷ್ಟ ಕಲಾ ಸ್ಪರ್ಧೆಯಾಗಿದೆ.

“ಕರ್ನಾಟಕದ ಅರಣ್ಯ ಅಥವಾ ಕರ್ನಾಟಕದ ವನ್ಯಜೀವಿ” ಎಂಬ ವಿಷಯ ಇಟ್ಟುಕೊಂಡು ಸ್ಪರ್ಧೆ ಆಯೋಜಿಸಲಾಗುತ್ತಿದ್ದು, ಈ ಮೂಲಕ ಮಕ್ಕಳಲ್ಲಿ ರಾಜ್ಯದ ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ನೈಸರ್ಗಿಕ ಸೌಂದರ್ಯವನ್ನು ಕಲೆಯ ಮೂಲಕ ಅರಿಯಲು ಪ್ರೇರೇಪಿಸಲಾಗುತ್ತದೆ.

ಪ್ರತೀ ಜಿಲ್ಲೆ ಮತ್ತು ತಾಲೂಕಿನ ಶಾಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪರಿಕಲ್ಪನೆಯನ್ನು ಚಿತ್ರಿಸಬಹುದು. ಈ ಮೂಲಕ ಕರ್ನಾಟಕದ ಪರಂಪರೆಯ ಕುರಿತು ಹೆಮ್ಮೆ ಬೆಳೆಸಿಕೊಳ್ಳಬಹುದು.

2. ಸ್ಪರ್ಧೆಯ ವಿವರ   

ಚಿತ್ರಕಲಾ ಸ್ಪರ್ಧೆಯು ರಾಜ್ಯಾದ್ಯಂತ ನಾಲ್ಕು ಹಂತಗಳಲ್ಲಿ ನಡೆಯಲಿದೆ.

1. ಶಾಲಾ ಮಟ್ಟದ ಸ್ಪರ್ಧೆಗಳು ಅತ್ಯುತ್ತಮ ಚಿತ್ರಕಾರರನ್ನು ತಾಲೂಕು ಮಟ್ಟದ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ

2. ತಾಲೂಕು ಮಟ್ಟದ ಸ್ಪರ್ಧೆಗಳು ಇಲ್ಲಿ ಗೆದ್ದ ವಿಜೇತರು ಜಿಲ್ಲಾ ಮಟ್ಟಕ್ಕೆ ಮುನ್ನಡೆಯುತ್ತಾರೆ.

3. ಜಿಲ್ಲಾ ಮಟ್ಟದ ಸ್ಪರ್ಧೆಗಳು ಪ್ರತೀ ಜಿಲ್ಲೆಯ ಉತ್ತಮ ಚಿತ್ರಕಾರರು ಅಂತಿಮ ಸುತ್ತಿಗೆ ತಲುಪುತ್ತಾರೆ.

4. ರಾಜ್ಯ ಮಟ್ಟದ ಗ್ರ್ಯಾಂಡ್ ಫಿನಾಲೆ- ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮಕ್ಕಳ ದಿನಾಚರಣೆ ಸಮಾರಂಭ

3. ಸ್ಪರ್ಧೆಯಲ್ಲಿ ಭಾಗವಹಿಸಬಹುದಾದ ವಿಭಾಗಗಳು:

ವಿಭಾಗ ಎ: 4 ಮತ್ತು 5ನೇ ತರಗತಿ

ವಿಭಾಗ ಬಿ 6 ಮತ್ತು 7ನೇ ತರಗತಿ

ವಿಭಾಗ ಸಿ 8,9, ಮತ್ತು 10ನೇ ತರಗತಿ

ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ.

4. ಪ್ರಶಸ್ತಿಗಳು ಮತ್ತು ಮನ್ನಣೆ

ಪ್ರತೀ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ

1. ಪ್ರಥಮ ಬಹುಮಾನ

2  ದ್ವಿತೀಯ ಬಹುಮಾನ

3 ತೃತೀಯ ಬಹುಮಾನ

4 ಸಮಾಧಾನಕರ ಬಹುಮಾನಗಳು

ಪ್ರತೀ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ ಮತ್ತು ಅತ್ಯುತ್ತಮ ಸಾಧನೆ

ತೋರಿದ ಮೂರು ಶಾಲೆಗಳಿಗೆ ‘ಶ್ರೇಷ್ಠ ಸ್ಪರ್ಧಾತ್ಮಕ ಶಾಲೆ” ಎಂಬ ಪ್ರಶಸ್ತಿ ನೀಡಿ

ರಾಜ್ಯ ಮಟ್ಟದ ಗ್ಯಾಂಡ್ ಫಿನಾಲೆ ಬೆಂಗಳೂರಿನಲ್ಲಿ ವರ್ಣರಂಜಿತವಾಗಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಈ ಕೆಳಗಿನ ಗಣ್ಯರು ಭಾಗವಹಿಸುತ್ತಾರೆ.

♦ ಕಲೆ ಅಥವಾ ಚಿತ್ರರಂಗದ ಪ್ರಸಿದ್ಧ ವ್ಯಕ್ತಿ

♦ ಕರ್ನಾಟಕ ಸರ್ಕಾರದ ಗೌರವಾನ್ವಿತ ಸಚಿವರು

♦ ಚಿತ್ರಕಲಾ ಪರಿಷತ್ ಮತ್ತು ಬಾಲ ಭವನದ ಹಿರಿಯ ಪ್ರತಿನಿಧಿಗಳು

5. ಕಾರ್ಯಕ್ರಮದ ಉದ್ದೇಶಗಳು

ಶಾಲಾ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಕಲಾತ್ಮಕ ಅಭಿವ್ಯಕ್ತಿಯನ್ನು ಪ್ರೋತ್ಸಾಹಿಸುವುದು.

ಕರ್ನಾಟಕದ ಅರಣ್ಯ ಅಥವಾ ಕರ್ನಾಟಕದ ವನ್ಯಜೀವಿ”  ಎಂಬ ವಿಷಯದ ಮೂಲಕ ರಾಜ್ಯದ ಕುರಿತು ಕಾಳಜಿ ಮೂಡಿಸುವುದು.

ಮಕ್ಕಳು, ಶಿಕ್ಷಕರು ಮತ್ತು ಕಲಾ ಸಮುದಾಯವನ್ನು ಸಂರ್ಕಿಸುವ ವೇದಿಕೆಯನ್ನು ಸೃಷ್ಟಿಸುವುದು.

6.ಸ್ಪರ್ಧಾ ವ್ಯಾಪ್ತಿ

ಭಾಗವಹಿಸುವ ಶಾಲೆಗಳು: ಕರ್ನಾಟಕದಾದ್ಯಂತ 5,000+ ಶಾಲೆಗಳು

ಭಾಗವಹಿಸುವ ನಿರೀಕ್ಷಿತ ವಿದ್ಯಾರ್ಥಿಗಳ ಸಂಖ್ಯೆ: 2,00,000 ಮಕ್ಕಳು

ಪಾಲ್ಗೊಳ್ಳುವ ಜಿಲ್ಲೆಗಳು: ಎಲ್ಲ 31 ಜಿಲ್ಲೆಗಳು

ಪ್ರೇಕ್ಷಕರ ವ್ಯಾಪ್ತಿ (ಪೋಷಕರು, ಶಿಕ್ಷಕರು, ನಾರ್ವಜನಿಕರು): ರಾಜ್ಯಾದ್ಯಂತ 10 ಲಕ್ಷಕ್ಕಿಂತ ಹೆಚ್ಚು ಜನರು.

6.ಸ್ಪರ್ಧೆಯಲ್ಲಿ ಭಾಗವಹಿಸುವ ಶಾಲೆಗಳು/ವಿದ್ಯಾರ್ಥಿಗಳಿಗೆ ಸೂಚನೆ

1) ಸ್ಪರ್ಧೆ ನಡೆಯುವ ಸ್ಥಳ :  ಶಕ್ತಿ ರೆಸಿಡೆನ್ಶಿಯಲ್‌ ಶಾಲೆ, ಶಕ್ತಿ ನಗರ, ಮಂಗಳೂರು

2) ಸ್ಪರ್ಧೆ ನಡೆಯುವ ದಿನಾಂಕ : 17.11.2025

3) ಸ್ಪರ್ಧೆ ಆರಂಭವಾಗುವ ಸಮಯ: ಬೆಳಿಗ್ಗೆ 08:45

4) ಸ್ಪರ್ಧೆಯ ಶೀರ್ಷಿಕೆ; ಕರ್ನಾಟಕದ ಅರಣ್ಯ ಅಥವಾ ಕರ್ನಾಟಕದ ವನ್ಯಜೀವಿ”

5) ಸ್ಪರ್ಧೆಯ ಅವಧಿ:  2 ಗಂಟೆಗಳು

6)ಸ್ಪರ್ಧಿಗಳು ಸ್ಪರ್ಧೆ ಆರಂಭವಾಗುವ ಅರ್ಧ ಗಂಟೆ ಮೊದಲು ಸೂಚಿಸಿದ ಸ್ಥಳದಲ್ಲಿ ಹಾಜರಿರಬೇಕು.

7)ಶಾಲೆಯ ಗುರುತುಚೀಟಿ ಹೊಂದಿರಬೇಕು.

8)ಸ್ಪರ್ಧೆಗೆ ಬೇಕಾದ ಡ್ರಾಯಿಂಗ್ ಶೀಟ್ ಸ್ಥಳದಲ್ಲೇ ಒದಗಿಸಲಾಗುವುದು.

9)ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೂ ಪ್ರಮಾಣಪತ್ರ ನೀಡಲಾಗುವುದು.

10)ಫಲಿತಾಂಶದಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮ.

ಸಂಪರ್ಕ ಸಂಖ್ಯೆ  : 9108043552

ರಾಘವೇಂದ್ರ ಅಗ್ನಿಹೋತ್ರಿ

ಬ್ಯೂರೋ ಮುಖ್ಯಸ್ಥರು, ಕನ್ನಡಪ್ರಭ ಮಂಗಳೂರು

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

  Mrs. Babitha Suraj Principal MSc, B.Ed 25 Years’ Experience...