Call Us :
+91 96860 00046
CBSE

Shakthi Education Trust

+91 9108043552
info@shakthi.edu.in

Dr. Yashovarma visits Shakthi Institutions

Mangaluru: Dr. Yashovarma, the secretary of ShreeDharmasthala Manjunatheshwara Educational Institutions visited Shakthi Institutions at Shakthinagar Mangaluru on 10th March, After going round the vast campus he said that he was attracted by the infrastructure, vast play ground, swimming pool, big library and neatly maintained hostels. He appreciated the kitchen garden raised in the campus where variety of vegetables are grown.

Addressing the teaching and non-teaching staff of Shakthi P.U.College and Shakthi Residential School he said that dedicated service is required to fulfil the vision of the founder. Baikady Janaradana Achar, the administrator of Shakthi Institutions introduced the chief guest and welcomed the gathering.

Dr. K.C Naik, the founder of Shakthi Institutions, Sanjith Naik, the secretary of Shakthi Education Trust, Vidya Kamath G, the Principal of Shakthi Residential School, Ramesh K, the chief advisor, Prabhakara G.S, the Principal of the college, Prakyath Rai, the Institute Development officer, Manmohan Nayak the principal of SDM College Ujire, Vardhaman, Shruthi, Maithri were present Shrinidhi Abhyankar, Sanskrit Lecturer compered the programme and proposed vote of thanks.

ಶಕ್ತಿ ವಿದ್ಯಾ ಸಂಸ್ಥೆಗಳಿಗೆ ಡಾ. ಯಶೋವರ್ಮ ಭೇಟಿ

ಮಂಗಳೂರು: ನಗರದ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಾದ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪಿ.ಯು. ಕಾಲೇಜಿಗೆ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಮಾರ್ಚ್ 10 ರಂದು ಭೇಟಿ ನೀಡಿದರು. ಅತ್ಯಾಧುನಿಕ ವಿಶಾಲವಾದ ಕಟ್ಟಡಗಳು, ದೊಡ್ಡ ಆಟದ ಮೈದಾನ, ಈಜು ಕೊಳ, ಸುಸಜ್ಜಿತ ವಾಚನಾಲಯ ಹಾಗೂ ಪ್ರಯೋಗಶಾಲೆಗಳು, ಸಾವಯವ ತರಕಾರಿ ಕೃಷಿ, ವಿದ್ಯಾರ್ಥಿ ನಿಲಯಗಳು, ಶಾಲಾ -ಕಾಲೇಜು ಮಕ್ಕಳಲ್ಲಿ ಮನೆ ಮಾಡಿದ್ದ ಶಿಸ್ತು, ರುಚಿ – ಶುಚಿಗೆ ಆದ್ಯತೆ ನೀಡಿರುವ ಕ್ಯಾಂಟೀನ್ ಹಾಗೂ ವಿದ್ಯಾರ್ಥಿ ನಿಲಯಗಳು ಸಂದರ್ಶಕರ ಗಮನ ಸೆಳೆದವು.

ಶಾಲೆ ಹಾಗೂ ಕಾಲೇಜಿನ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದ ಡಾ. ಯಶೋವರ್ಮ ಶಿಕ್ಷಣ ಸಂಸ್ಥೆಗಳ ಸ್ಥಾಪಕರ ದೂರದೃಷ್ಟಿಯನ್ನು ಅರ್ಥೈಸಿಕೊಂಡು ಸಂಸ್ಥೆಯ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ದುಡಿಯುವುದೇ ನಮ್ಮ ಆದ್ಯ ಕರ್ತವ್ಯವಾಗಿರಬೇಕೆಂದು ಕರೆ ನೀಡಿದರು. ಆರಂಭದಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು.

ಶಕ್ತಿ ಎಜುಕೇಶನ್‌ಟ್ರಸ್ಟ್‌ನ ಸ್ಥಾಪಕ ಡಾ. ಕೆ. ಸಿ. ನಾೖಕ್‌, ಕಾರ್ಯದರ್ಶಿ ಸಂಜಿತ್ ನಾೖಕ್‌, ಶಕ್ತಿ ವಸತಿ ಶಾಲೆಯ ಪ್ರಾಚಾರ್ಯೆ ವಿದ್ಯಾಕಾಮತ್ ಜಿ. ಪ್ರಧಾನ ಸಲಹೆಗಾರ ರಮೇಶ ಕೆ, ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್‌ ರೈ, ಉಜಿರೆ ಎಸ್. ಡಿ.ಎಂ. ಕಾಲೇಜಿನ ಪ್ರಾಚಾರ್ಯ ಮನಮೋಹನ್ ನಾಯಕ್, ವರ್ಧಮಾನ್, ಶ್ರುತಿ, ಮೈತ್ರಿ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಕೃತ ಪ್ರಾಧ್ಯಾಪಕ ಶ್ರೀನಿಧಿ ಅಭ್ಯಂಕರ್‌ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

  Mrs. Babitha Suraj Principal Mrs. Sushma Satish Coordinator –...