India is the Only country in the world where different religions, language, culture climatic conditions prevail. We find unity in diversity in our nation. Dr. B.R Ambedkar framed the constitution for India so as to have unity and peace in this country. The constitution framed under his leadership gave importance to economic and social equality. Human values and discipline is very important for a developing country. Therefore we have to inculcate in us all the values upheld in our constitution so as to strengthen our nation said Smt. Vidya Kamath G. the Principal of Shakthi Residential School. She was addressing the students of Shakthi Residential School on the occasion of Constitution Day celebrated in the school.
The students took an oath in the name of constitution to uphold justice, equality, brotherhood and liberty.
ಶಕ್ತಿ ಶಾಲೆಯಲ್ಲಿ ಸಂವಿಧಾನ ದಿನಾಚರಣೆ
ಭಾರತದೇಶವು ಹಲವಾರು ಧರ್ಮ, ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಒಳಗೊಂಡ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರಿದ ರಾಷ್ಟ್ರ. ದೇಶದಲ್ಲಿ ಒಗ್ಗಟ್ಟು ಹಾಗೂ ಶಾಂತಿಯುತ ಸಮಾಜ ನಿರ್ಮಾಣವಾಗಬೇಕೆಂಬ ಉದ್ದೇಶದಿಂದ ಡಾ. ಬಿ. ಆರ್. ಅಂಬೇಡ್ಕರ್ ನೇತೃತ್ವದಲ್ಲಿ 1949 ನವೆಂಬರ್ 26 ರಂದು ಸಂವಿಧಾನ ರಚನೆಯಾಯಿತು. ಆರ್ಥಿಕ, ಸಾಮಾಜಿಕ, ಔದ್ಯೋಗಿಕವಾಗಿ ಮುಂದುವರೆಯುತ್ತಿರುವ ನಮ್ಮದೇಶದಲ್ಲಿ ಶಿಸ್ತು, ಮಾನವೀಯ ಮೌಲ್ಯಗಳ ಅಗತ್ಯವೂ ಇದೆ. ಆದ್ದರಿಂದ ಈ ಸಂವಿಧಾನ ತತ್ವಗಳನ್ನು ನಮ್ಮ ನಿತ್ಯಜೀವನದಲ್ಲಿ ಅಳವಡಿಸಿ ಬದುಕೋಣ ಎಂದು ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ನಡೆಸಿದ ಸಂವಿಧಾನ ದಿನಾಚರಣೆಯ ಸಂದರ್ಭ ವಿದ್ಯಾರ್ಥಿಗಳನ್ನುದ್ದೇಶಿಸಿ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ. ಮಾತನಾಡಿದರು.
ವಿದ್ಯಾರ್ಥಿಗಳು ನ್ಯಾಯ, ಸಮಾನತೆ, ಭ್ರಾತೃಭಾವನೆ ಮತ್ತು ಸ್ವಾತಂತ್ರ್ಯದ ಪ್ರದರ್ಶನ ಫಲಕ ಹಿಡಿದು ತೋರಿಸುತ್ತ ಸಂವಿಧಾನ ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಓದಿದರು.
ವಿದ್ಯಾರ್ಥಿಗಳು ಶಿಕ್ಷಕರು ಪಾಲ್ಗೊಂಡುಕಾರ್ಯಕ್ರಮವನ್ನುಅರ್ಥಪೂರ್ಣವಾಗಿ ನಡೆಸಿಕೊಟ್ಟರು.