Ring out the old, ring in the new. Ring, happy bells, across the snow. The year is going, let him go. Ring out the false, ring in the true” said Alfred Lord Tennyson.
With the hope that the Pandemic would ring out at the earliest and ring in Students into the traditional way of learning, the teachers of Shakthi Residential School organized Christmas celebration. Students were given tasks that would divert them from being active gazers of electronic gadgets. Competitions in the form of drawing a Christmas tree and coloring, Making Stars using Eco-friendly materials, dressing up like Santa and Greeting Card Making was assigned.
Virtual classes and activities have been a continuous affair from May till date. The rapport with the students is an ongoing act at Shakthi.Along with the virtual classes and assignments various activities are also taken up.
Virtual Traditional day was celebrated recently for the students of all grades. For the gorgeously dressed students in traditional attire Shakthi Siri and Shakthi Srititle was ascribed. Sajni and Mariyam Ansum bagged the Shakthi Siri title for junior and senior grade respectively. While Hridik Vinay Devadiga and Tanmay Poojary were honored with Shakthi Srititle for junior and senior cadre respectively. The Management, Principal and Staff congratulates the winners and their Parents for their prompt participation and co-operation.
May God shower us with all the goodness in the world. May we be blessed with all that we have dreamt about.Wishing you strength and peace in these challenging times.”
ಕ್ರಿಸ್ಮಸ್ ಆಚರಣೆ
ಪ್ರಸ್ತುತ ದಿನದ ಒತ್ತಡದಿಂದ ಶಾಲೆಯ ವಾತಾವರಣ ಮನೋರಂಜನೆಯಿಂದ ವಂಚಿತರಾದ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಸಂಸ್ಥೆಯು ಆನ್ಲೈನ್ ತರಗತಿಯ ಮೂಲಕ ಶಿಕ್ಷಣವನ್ನು ನೀಡುವುದರ ಜೊತೆಗೆ ಹಲವಾರು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಏರ್ಪಡಿಸುತ್ತಾ ಬಂದಿದ್ದು, ರಾಷ್ಟ್ರೀಯ ಹಬ್ಬಗಳ ಸಂದರ್ಭ ಬಗೆ ಬಗೆಯ ಸ್ಪರ್ಧೆಯನ್ನು ಏರ್ಪಡಿಸಿತ್ತು. ಮಕ್ಕಳ ದಿನಾಚರಣೆಯ ಪ್ರಯುಕ್ತ ಪ್ರತೀ ವರ್ಷದಂತೆ ’ಶಕ್ತಿ ಸಿರಿ, ಶಕ್ತಿ ಶ್ರೀ’ ಎಂಬ ಸ್ಪರ್ಧೆಯನ್ನು ಏರ್ಪಡಿಸಿ ಸುಂದರವಾದ ಉಡುಪು, ಅಲಂಕಾರದೊಂದಿಗೆ ರ್ಯಾಂಪ್ ವಾಕ್ ಮಾಡಿ ಉತ್ತಮ ಪ್ರದರ್ಶನ ನೀಡಿದ ಇಬ್ಬರು ವಿದ್ಯಾರ್ಥಿಗಳನ್ನು ’ಶಕ್ತಿ ಸಿರಿ ಮತ್ತು ಶಕ್ತಿ ಶ್ರೀ’ ಎಂದು ಆಯ್ಕೆ ಮಾಡಲಾಗಿದೆ. ಜೂನಿಯರ್ ವಿಭಾಗದಲ್ಲಿ ಸಜಿನಿ ಆಚಾರ್ಯ ಹಾಗೂ ಮಾ| ಹೃದಿಕ್ ವಿನಯ್ ಮತ್ತು ಸೀನಿಯರ್ ವಿಭಾಗದಲ್ಲಿ ಮರಿಯಮ್ ಅನ್ಸುಂ ಮತ್ತು ಮಾ| ತನ್ಮಯ್ ಪೂಜಾರಿ ಆಯ್ಕೆಯಾಗಿದ್ದಾರೆ.
ಅದೇ ರೀತಿ ವಿದ್ಯಾರ್ಥಿಗಳಿಗೆ ಶಾಲೆ ಹಾಗೂ ಶಾಲೆಯ ಕೊಠಡಿಗಳನ್ನು ಹೊರತು ಪಡಿಸಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಮೂಲಕ ಮನೆಯಲ್ಲಿಯೇ ಶಾಲೆಯ ವಾತಾವರಣವನ್ನು ಕಲ್ಪಿಸಿಕೊಡುವಲ್ಲಿ ಶಕ್ತಿ ವಸತಿ ಶಾಲೆಯು ಪೂರ್ಣ ಪ್ರಮಾಣದಲ್ಲಿ ಸಹಕರಿಸಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಕ್ರಿಸ್ಮಸ್ ಆಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಕ್ರಿಸ್ಮಸ್ ಟ್ರೀ, ಕ್ರಿಸ್ಮಸ್ ಗ್ರೀಟಿಂಗ್ಸ್, ಕ್ರಿಸ್ಮಸ್ ಸ್ಟಾರ್ ತಯಾರಿಕೆ, ಚಿತ್ರಕಲೆ ಹಾಗೂ ಕ್ರಿಸ್ಮಸ್ ಸಂತನಂತೆ ಉಡುಪು ಧರಿಸಿ ನರ್ತಿಸುವ ಸ್ಪರ್ಧೆಯನ್ನು ಏರ್ಪಡಿಸಿದೆ.
ಈ ನಿಮಿತ್ತ ವಿದ್ಯಾರ್ಥಿಗಳಿಗೆ ಮನರಂಜನೆಯನ್ನು ನೀಡುವ ಉದ್ದೇಶದಿಂದ ಶಾಲಾ ಶಿಕ್ಷಕರು, ಪ್ರಾಂಶುಪಾಲರು, ಆಡಳಿತ ಮಂಡಳಿಯವರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಾಯೋಜಿಸಿ, ಹೊಸ ವರುಷದ ನವ ಚೇತನ ವಿಶ್ವದೆಲ್ಲೆಡೆ ಸುಖ, ಶಾಂತಿ, ಆರೋಗ್ಯ, ಸಮೃದ್ಧಿಯನ್ನು ತರಲಿ ಎಂದು ಶುಭ ಹಾರೈಕೆಯನ್ನು ವ್ಯಕ್ತಪಡಿಸಿದ್ದಾರೆ.