ಸಿಬಿಎಸ್‌ಇ 10 ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯು 99.32% ದಾಖಲಿಸಿಕೊಂಡಿರುತ್ತದೆ. ಪರೀಕ್ಷೆ ಬರೆದಿರುವ ಒಟ್ಟು 146 ವಿದ್ಯಾರ್ಥಿಗಳಲ್ಲಿ 145 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇದರಲ್ಲಿ ನೈದಿಲೆ ಎಸ್.ಹನಗಂಡಿ 473 (94.6%), ಅದಿತ್ ಎನ್ 468 (93.6%), ಶೌರ್‍ಯ ಎಮ್ ದೂಪಡ್ 465 (93%), ಅಮನ್ ಎಮ್ 464 (92.8%), ದೇವಾಂಶ್ ಎಸ್ ಗೌಡ 463 (92.6%), ಸಿಂಚನ ಗೌಡ 460 (92%), ರಾಜಶ್ರೀ ಶಂಕರ್ 458 (91.6%), ನಿಖಿತ್ ಎ. 457 (91.4%), ಕೃಷ್ಣ ಎಸ್. ನಿಲೆ 456 (91.2%), ಅನಂತ್ ರಾಮ್ ನಾೖಕ್ ಎ. 453 (90.6%), ಜ್ಯುವೆಲ್ ಸೋಫಿ ಜೋಸೆಫ್ 452 (90.4%), ಹೇಮಂತ್ ಎಚ್.ಜಿ. 452 (90.4%) ಅಂಕಗಳನ್ನು ಗಳಿಸಿರುತ್ತಾರೆ.
ವಿಶಿಷ್ಟ ಶ್ರೇಣಿಯಲ್ಲಿ 55 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 61 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 30 ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ.
ತೇರ್ಗಡೆಯಾಗಿರುವ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತಮಂಡಳಿಯ ಆಡಳಿತಾಧಿಕಾರಿ ಡಾ.ಕೆ.ಸಿ. ನಾೖಕ್, ಕಾರ್ಯದರ್ಶಿ ಸಂಜೀತ್ ನಾೖಕ್, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್ ಅಭಿನಂದಿಸಿದ್ದಾರೆ.