ಮಂಗಳೂರು ಮೇ 13: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯು ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು 100% ಫಲಿತಾಂಶದಲ್ಲಿ ತೇರ್ಗಡೆಯಾಗಿರುತ್ತಾರೆ. ಇದು ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾರಂಭವಾದ ನಂತರದ ಎಸ್‌ಎಸ್‌ಎಲ್‌ಸಿ ಸಿಬಿಎಸ್‌ಇಯ ಮೂರನೇ ತಂಡವಾಗಿರುತ್ತದೆ. ಮೂರನೇ ಬಾರಿಗೂ 100% ಪಡೆದಿರುವುದು ಸಂಸ್ಥೆಯ ಸಾಧನೆಯಾಗಿದೆ. ಒಟ್ಟು 107 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು 90%ಕ್ಕಿಂತ ಅಧಿಕ ಅಂಕ ಪಡೆದಿದ್ದು, 12 ವಿದ್ಯಾರ್ಥಿಗಳು 85%ಕ್ಕಿಂತ ಅಧಿಕ ಅಂಕ ಪಡೆದು ತೇರ್ಗಡೆಯಾಗಿರುತ್ತಾರೆ.
ಒಟ್ಟು 500 ಅಂಕಗಳಲ್ಲಿ ಸಾತ್ವೀರ್ ಶರತ್ ರೈ 485, ಎ.ಎನ್ ಯುವರಾಜ್‌ದೀಪ್ 483, ದಿವ್ಯ 477, ತನ್ಮಯಿ ಭಟ್ 475, ಕೆ ಎಸ್ ಹರ್ಷಲ್ ಕುಶಾಲಪ್ಪ 467, ಅಮೃತ ಎಸ್ ಭಟ್ 465, ಸಿದ್ದರಾಮ ಹೊಸಳ್ಳಿ 465, ಪ್ರಜ್ನನ್ ಪಿ ಪಿ 463, ಬೋಪಣ್ಣ ಪಿ.ಡಿ 461, ಅನುಜ್ 454, ಅವನೀಶ್ ಎಂ. ನಾೖಕ್ 450 ಅಂಕ ಪಡೆಯುವುದರ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.
ತೇರ್ಗಡೆಯಾಗಿರುವ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತಮಂಡಳಿಯ ಆಡಳಿತಾಧಿಕಾರಿ ಡಾ.ಕೆ. ಸಿ ನಾೖಕ್, ಕಾರ್ಯದರ್ಶಿ ಸಂಜೀತ್ ನಾೖಕ್, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಹೆಚ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲ ಬಬಿತ ಸೂರಜ್ ಅಭಿನಂದಿಸಿದ್ದಾರೆ.