ಮಂಗಳೂರು : ನಗರದ ಶಕ್ತಿ ವಸತಿ ಶಾಲೆ ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಹಯೋಗದೊಂದಿಗೆ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ನೇತೃತ್ವದಲ್ಲಿ ಉಚಿತ ಯೋಗ ಶಿಬಿರವು ದಿನಾಂಕ 22-10-2018 ರಿಂದ 31-10-2018 ರ ತನಕ ಸುಮನಸ ಸಭಾಂಗಣ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶಕ್ತಿ ನಗರದಲ್ಲಿ ನಡೆದಿರುತ್ತದೆ. ಇದರ ಸಮಾರೋಪ ಸಮಾರಂಭವು ದಿನಾಂಕ 31-10-2018 ರ ಸಂಜೆ 5.30 ಕ್ಕೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.
ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ಕುಡುಪಿ ಜಗದೀಶ್ ಶೆಣೈ, ಆಡಳಿತ ನಿರ್ದೇಶಕರು ನ್ಯೂ ತಾಜ್ ಮಹಲ್ ಕೆಫೆ ಪ್ರೈ. ಲಿ, ಮಂಗಳೂರು ಹಾಗೂ ಪ್ರವೀಣ್ ಚಂದ್ರ ಆಳ್ವ ಚೇರ್‌ಮೆನ್, ನಗರ ಯೋಜನೆ ಮತ್ತು ಅಭಿವೃದ್ಧಿ ವಿಭಾಗ ಮಂಗಳೂರು ಮಹಾನಗರ ಪಾಲಿಕೆ ಇವರು ಭಾಗವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ. ಸಿ. ನ್ಮಾಕ್ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಅಧಿಕಾರಿ ಶ್ರೀ ಕೃಷ್ಣ ಕುಮಾರ್, ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಹಾಗೂ ಪ್ರಧಾನ ಸಲಹೆಗಾರ ರಮೇಶ್ .ಕೆ , ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ.ಎಸ್, ಅಭಿವೃದ್ಧಿ ಅಧಿಕಾರಿ ನಸೀಮ ಬಾನು ಉಪಸ್ಥಿತರಿರುತ್ತಾರೆ.