ಮಂಗಳೂರು – ಪುಣೆಯಲ್ಲಿ ಜರುಗಿದ ರಾಷ್ಟ್ರೀಯ ಬಾಲ ವೈಜ್ಞಾನಿಕ ಪ್ರದರ್ಶಿನಿಯಲ್ಲಿ ಶಕ್ತಿ ವಸತಿ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಶಾಸ್ತಾ ನಾಯಕ್ ವಿ. ಹಾಗೂ ನಾಲ್ಕನೇ ತರಗತಿ ವಿದ್ಯಾರ್ಥಿ ಶ್ರೇಷ್ಠ ನಾಯಕ್ ವಿ. ಭಾಗವಹಿಸಿದ್ದರು. ಅವರು ಪ್ರಸ್ತುತ ಪಡಿಸಿದ “ತೆಂಗಿನ ಕಾಯಿಯನ್ನು ಒಣಗಿಸುವ ವಿಶೇಷಯಂತ್ರ” ರಾಷ್ಟ್ರ ಮಟ್ಟದಲ್ಲಿ ಇನ್ಸ್ಪಿರೇಶನಲ್ ಸೈನ್ಸ್ ಮೊಡೆಲ್ ಎಂಬ ಪ್ರಶಸ್ತಿಯನ್ನು ಪಡೆದಿದ್ದಾರೆ. ನ್ಯಾಶನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಆಂಡ್ ಟ್ರೈನಿಂಗ್ ಇವರು ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ 206 ತಂಡಗಳು ಭಾಗವಹಿಸಿದ್ದು, ಅದರಲ್ಲಿ 6 ತಂಡಗಳು ವಿಜೇತರಾಗಿ ಹೊರಹೊಮ್ಮಿದ್ದಾರೆ. ಆ ಆರು ತಂಡಗಳಲ್ಲಿ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳ ತಂಡವೂ ಒಂದು ಎಂಬುದು ಹೆಮ್ಮೆಯ ಸಂಗತಿ. ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ತಂಡ ನಿರ್ಣಾಯಕರ ಪ್ರಶಂಸೆಗೂ ಪಾತ್ರವಾಗಿದೆ.
ಇವರ ಈ ಸಾಧನೆಗೆ ನಮ್ಮ ಶಾಲೆಯ ಜೀವಶಾಸ್ತ್ರ ಉಪನ್ಯಾಸಕಿ ಚೈತ್ರಾ ಯು ಭಂಡಾರಿ ಅವರ ನಿರ್ದೇಶನ ಲಭಿಸಿದೆ. ವಿದ್ಯಾರ್ಥಿಗಳ ಪಾಲಕರಾದ ಶ್ರೀನಾಥ್ ಹಾಗೂ ಶ್ರೀಮತಿ ಚಂದ್ರಿಕಾ ಶ್ರೀನಾಥ್ ಅವರಿಗೂ ಈ ಸಾಧನೆಯ ಶ್ರೇಯಸ್ಸು ಸಲ್ಲುತ್ತದೆ.
ಇವರ ಈ ಸಾಧನೆಗೆ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಕೆ. ಸಿ ನಾಕ್, ಕಾರ್ಯದರ್ಶಿಗಳಾದ ಶ್ರೀ ಸಂಜಿತ್ ನಾಕ್, ಪ್ರಧಾನ ಸಲಹೆಗಾರರಾದ ಶ್ರೀ ರಮೇಶ್ ಕೆ. ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವೆಂಕಟೇಶ ಮೂರ್ತಿ ಹೆಚ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ರವಿಶಂಕರ ಹೆಗಡೆ ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂಧಿಗಳು ಅಭಿನಂದನೆ ಸಲ್ಲಿಸಿದ್ದಾರೆ.