ಆಗಸ್ಟ್ 22 : ಮಂಗಳೂರಿನ ಪ್ರತಿಷ್ಠಿತ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ ಸಂಸ್ಥೆ ಮಂಗಳೂರು ಇವರಿಂದ ದೇಶಭಕ್ತಿ ’ಗೀತ-ಗಾಯನ ಸ್ಪರ್ಧೆ-2023’. ಶಕ್ತಿ ವಸತಿ ಶಾಲೆಯ ರೇಶ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ನೆರವೇರಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಕ್ತಿ ವಿದ್ಯಾ ಸಂಸ್ಥೆ ಸಂಸ್ಥಾಪಕರಾದ ಡಾ.ಕೆ.ಸಿ. ನಾೖಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು ಶಕ್ತಿ ವಿದ್ಯಾ ಸಂಸ್ಥೆಯು ಒಂದು ಗುರುಕುಲ ಮಾದರಿ ಶಿಕ್ಷಣವನ್ನು ನೀಡುತ್ತಾ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಕಲ ಸೌಲಭ್ಯಗಳನ್ನು ಒದಗಿಸುತ್ತದೆ. ಭಾರತ್ ಸ್ಕೌಟ್ ಗೈಡ್ ಸಂಸ್ಥೆಯು ಮಕ್ಕಳಲ್ಲಿ ದೇಶ ಪ್ರೇಮವನ್ನು ತುಂಬಿಸುವ ಉದ್ದೇಶದೊಂದಿಗೆ ಈ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮವು ಯಶಸ್ವಿ ಆಗಲಿ ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ವಸಂತ್ ರಾವ್ ಅಧಕ್ಷರು ಭಾರತ್ ಸ್ಕೌಟ್ ಗೈಡ್ ಮಂಗಳೂರು ದಕ್ಷಿಣ, ಶ್ರೀಮತಿ ಪ್ರೀತಿ ಲೋಬೋ ಜತೆ ಕಾರ್‍ಯದರ್ಶಿ ಭಾರತ್ ಸ್ಕೌಟ್ ಗೈಡ್ ಮಂಗಳೂರು ದಕ್ಷಿಣ ಹಾಗೆನೆ ಭಾರತ್ ಸ್ಕೌಟ್ ಗೈಡ್, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ ಸ್ಥಳಿಯ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ಮತ್ತು ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಗಣಿತ ಶಿಕ್ಷಕಿ ಭವ್ಯಶ್ರೀ ಅವರು ನಿರೂಪಿಸಿದರು. ಕನ್ನಡ ಅಧ್ಯಾಪಕ ಶರಣಪ್ಪ ಸ್ವಾಗತಿಸಿದರು. ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ಅವರು ವಂದಿಸಿದರು.
ಭಾರತ್ ಸ್ಕೌಟ್ ಮತ್ತು ಗೈಡ್ ತರಬೇತಿ ಪಡೆದ ಶಕ್ತಿ ವಿದ್ಯಾ ಸಂಸ್ಥೆಯ ಶಿಕ್ಷಕರುಗಳಾದ ಸುರೇಖಾ, ಭವ್ಯ ಅಮೀನ್, ಪ್ರೇಮಲತಾ ಮತ್ತು ಸುಪ್ರಿಯ ಅವರು ಸಹಕರಿಸಿದರು.