ಮಂಗಳೂರು ನ. 10 : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ 9 ಮತ್ತು 10 ನೇ ತರಗತಿಯ 129 ವಿದ್ಯಾರ್ಥಿಗಳು ಕೊರೋನಾ ನಂತರದ ಮೊದಲ ಶೈಕ್ಷಣಿಕ ಪ್ರವಾಸವನ್ನು ನವೆಂಬರ್ 3 ರಿಂದ 6 ರ ತನಕ ಮೈಸೂರು ಹಾಗೂ ಕೊಡಗು ಜಿಲ್ಲೆಯ ಅನೇಕ ಪ್ರವಾಸಿ ತಾಣಗಳನ್ನು ಹಾಗೂ ಐತಿಹಾಸಿಕ ಸ್ಥಳಗಳನ್ನು ಸಂದರ್ಶನ ಮಾಡಿದ ನಂತರ ವಿದ್ಯಾರ್ಥಿಗಳಿಗೆ ಈ ಸಂದರ್ಶನದ ಕುರಿತಂತೆ ಸವಿಸ್ತಾರವಾದ ವರದಿಯ ಕುರಿತಂತೆ ಚರ್ಚೆಯನ್ನು ಶಾಲೆಯಲ್ಲಿ ಆಯೋಜಿಸಲಾಗಿದೆ. ಆಡಳಿತ ಮಂಡಳಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೋಸ್ಕರ ಈ ತರದ ಪಠ್ಯೇತರ ಚಟುವಟಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಈಜು ತರಬೇತುದಾರ ರಾಜೇಶ್ ಖಾರ್ವಿ, ಅಧ್ಯಾಪಕರಾದ ಶರಣಪ್ಪ, ಸ್ಮಿಶಾ, ಸುರೇಖಾ, ಗಣಪತಿಯವರು ಪ್ರವಾಸದ ಸಂಘಟಕರಾಗಿ ಕಾರ್ಯನಿರ್ವಹಿಸಿರುತ್ತಾರೆ.