ಮಂಗಳೂರಿನ ಶಕ್ತಿನಗರದ ಶಕ್ತಿ ವಸತಿ ಶಾಲೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ದಿನಾಂಕ: 31-5-2022 ಮಂಗಳವಾರದಂದು ವಿಶ್ವ ತಂಬಾಕುರಹಿತ ದಿನವನ್ನು ಆಚರಿಸಲಾಯಿತು.
ತಂಬಾಕು ಮನುಷ್ಯನ ಆರೋಗ್ಯವನ್ನು ಕೊಲ್ಲುತ್ತದೆ. ತಂಬಾಕು ಸೇವನೆಯಿಂದ ನಾನಾ ರೀತಿಯ ಗುಣಪಡಿಸಲಾಗದ ರೋಗಗಳು ಮನುಷ್ಯನನ್ನು ಭಾದಿಸುತ್ತವೆ. ಇದರಿಂದ ತಾನು ದುಡಿದು ಸಂಪಾದಿಸಿದ ಅರ್ಧದಷ್ಟು ಆದಾಯವನ್ನು ಈ ರೋಗಗಳಿಂದ ರಕ್ಷಿಸಿಕೊಳ್ಳಲು ಖರ್ಚು ಮಾಡುವ ಪರಿಸ್ಥಿತಿ ಬರುತ್ತದೆ. ಯುವಜನಾಂಗ ಎಚ್ಛೆತ್ತುಕೊಂಡು ತಂಬಾಕುಮುಕ್ತ ಸಮಾಜವನ್ನು ನಿರ್ಮಿಸಬೇಕಾಗಿದೆ. ನಾವೆಲ್ಲಾ ನಮ್ಮ ಕುಟುಂಬವನ್ನು ಸಮಾಜವನ್ನು ತಂಬಾಕು ಸೇವನೆಯಿಂದ ದೂರ ಮಾಡೋಣ, ಸ್ವಸ್ಥ ಸಮಾಜವನ್ನು ಕಟ್ಟೋಣ. ಎಂದು ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ವಿದ್ಯಾ ಕಾಮತ್ ಜಿ ಅವರು ತಿಳಿಸಿದರು.
ನಂತರ ವಿದ್ಯಾರ್ಥಿಗಳೆಲ್ಲರೂ ತಂಬಾಕು ಸೇವನೆಯಿಂದುಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಿರುನಾಟಕವನ್ನು ನಡೆಸಿಕೊಟ್ಟರು ಮತ್ತು ತಂಬಾಕುಮುಕ್ತ ಸಮಾಜವನ್ನು ನಿರ್ಮಾಣ ಮಾಡುವುದಾಗಿ ಪ್ರತಿಜ್ಞೆ ಕೈಗೊಂಡರು.
ವಿದ್ಯಾರ್ಥಿಗಳಿಗೆ ತಂಬಾಕು ಸೇವನೆಯಿಂದುಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಿರುಚಿತ್ರವನ್ನು ತೋರಿಸಲಾಯಿತು ಮತ್ತು ವಿವಿಧ ಭಿತ್ತಿಚಿತ್ರಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಥ್ವಿರಾಜ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ಆಯುಷ್. ಎಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಹರ್ಷಿತಾ ತಂಬಾಕುರಹಿತ ದಿನದ ಪ್ರಾಮುಖ್ಯತೆ ವಾಚನ ಮಾಡಿದರು.