Birth Anniversary of the Hockey legend Major Dhyan Chand, observed as the National Sports Day was celebrated at Shakthi Residential School. Dr. Kishore Kumar C K, the Director of Physical Education at Mangalore University was the Chief Guest. He stressed on the need to remain physically fit through various sports and games.
The present pandemic has led to physical and mental illness and sports serve as a medicine. Exercise and Sports go hand in hand and walking jogging, running along with certain indoor games will definitely help in physical fitness to the children as well as the elders at home. Recalling the contributions of Dhyan Chand, he conveyed his dedication and passion towards hockey took him to greater heights.
Stressing the need to stay fit and healthy this day is observed to spread awareness on the importance of sports and daily activities in every individual’s life. He spoke on the need to balance academics and sports. Present lifestyle and food habits has led to a lot of disorder therefore the need to implement sports activity at Childhood arises said Dr. Kishore Kumar C K.
Initially Saksham Bolar, Saloni and Saira Dominic the students of Shakthi Residential School spoke on the significance of the Day. The winners of the National Sports Quiz and the ‘Traditional Game’ video contest winners were announced by Deepthi G.
Sreenivas B M, the Physical Education Teacher tried to reminisce the forgotten world of the ‘Grameena Kreede’ through a video presentation.
Dr. K.C Naik the Managing Trustee of Shree Gopalakrishna Temple, Mr. Sanjith Naik the Secretary of Shakthi Education Trust,Ramesh K the Chief Advisor, Prakyath Rai the Institute Development Officer, Prabhakara G.S., Principal Shakthi PU College, Vidya Kamath, Principal Shakthi Residential School, Neema Saxena, co-ordinator Shree Gopalakrishna Pre-School, Teaching and Non-teaching staff along with the parents and students were connected virtually. Swathi Bharath introduced the guest while compering the show.
ಇ-ಕ್ರೀಡಾ ದಿನಾಚರಣೆ
ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಯೋಜನಕಾರಿಯಾದುದು. ಪ್ರಸ್ತುತ ದಿನಗಳಲ್ಲಿ ಜನರುದೈಹಿಕ ಹಾಗೂ ಮಾನಸಿಕ ಅನಾರೋಗ್ಯ, ಒತ್ತಡಗಳಿಗೆ ಒಳಗಾಗಿದ್ದಾರೆ. ಅದಕ್ಕಾಗಿ ಕ್ರೀಡೆಯೊಂದು ಔಷಧಿಯಂತೆ ಕೆಲಸ ಮಾಡುತ್ತದೆ. ಕ್ರೀಡೆಗಳು ವ್ಯಾಯಾಮಗಳ ಮೂಲಕ ಮಾನಸಿಕ ಒತ್ತಡವನ್ನು ನಿವಾರಿಸಬಹುದು. ನಡೆಯುವುದು, ಓಡುವುದು ಮೊದಲಾದ ವ್ಯಾಯಾಮಗಳ ಮೂಲಕ ಹಾಗೂ ಒಳಾಂಗಣ ಕ್ರೀಡೆಗಳನ್ನು ಆಡುವುದರ ಮೂಲಕ ಈ ದಿನಗಳಲ್ಲಿ ಮನೆಯ ಒಳಗೆ ಇರುವಂತಹ ವಯಸ್ಕರು ಹಾಗೂ ಮಕ್ಕಳು ತಮ್ಮ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ನಿವಾರಿಸಬಹುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣದ ನಿರ್ದೇಶಕರು ಡಾ. ಕಿಶೋರ್‌ಕುಮಾರ್ ಸಿ. ಕೆಕರೆ ನೀಡಿದರು.
ಧ್ಯಾನ್‌ಚಂದ್‌ರವರು ಕ್ರೀಡೆಗೆ ನೀಡಿದ ಮಹತ್ವ, ಕೊಡುಗೆಯ ಕಾರಣಕ್ಕಾಗಿ ಇಂದು ಅವರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ಕ್ರೀಡಾ ದಿನವೆಂದು ಆಚರಿಸುತ್ತೇವೆ. ಇಂದಿನ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಯ ಜೊತೆಗೆ, ಕ್ರೀಡೆಗಳಲ್ಲೂ ಭಾಗವಹಿಸಬೇಕು. ಆ ಮೂಲಕ ದೈಹಿಕ ಸಾಮರ್ಥ್ಯದ ಕಡೆಗೆ ಗಮನ ಹರಿಸಬೇಕು. ದೈಹಿಕ ವ್ಯಾಯಾಮ ಕ್ರೀಡೆ ದೇಹದ ಆರೋಗ್ಯದ ಜೊತೆಗೆ ಬುದ್ಧಿಯನ್ನು ಚುರುಕಾಗಿಸುತ್ತದೆ. ಒಳಾಂಗಣ ಕ್ರೀಡೆಗಳು ಮನರಂಜನೆಯ ಜೊತೆಗೆ ಬುದ್ಧಿ ಸಾಮರ್ಥ್ಯವನ್ನು ಚುರುಕುತನವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಇಂದಿನ ಆಹಾರ ಪದ್ಧತಿ, ಜೀವನಕ್ರಮದಿಂದ ಅನಾರೋಗ್ಯಕ್ಕೂ ತುತ್ತಾಗುತ್ತಾರೆ. ಅದಕ್ಕೋಸ್ಕರ ಮಕ್ಕಳು ಬಾಲ್ಯದಲ್ಲೇ ಕ್ರೀಡೆ, ವ್ಯಾಯಾಮಗಳನ್ನು ನಿರಂತರವಾಗಿ ಅಭ್ಯಾಸಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಯವರೊಂದಿಗೆ ಆಡಿದ ಗ್ರಾಮೀಣ ಕ್ರೀಡೆಗಳ ವೀಡಿಯೋವನ್ನು ಬಿತ್ತರಿಸಲಾಯಿತು. ಗ್ರಾಮೀಣ ಕ್ರೀಡೆಗಳಲ್ಲಿ ಹಾಗೂ ಕ್ರೀಡಾ ದಿನಾಚರಣೆಯ ಅಂಗವಾಗಿ ಇ-ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರ ಹೆಸರನ್ನು ಶಿಕ್ಷಕಿ ದೀಪ್ತಿ ಓದಿದರು.
ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೆಸರರಾದ ಡಾ. ಕೆ.ಸಿ. ನಾೖಕ್, ಶಕ್ತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಂಜೀತ್ ಸಿ. ನಾೖಕ್, ಮುಖ್ಯ ಸಲಹೆಗಾರರಾದ ರಮೇಶ್ ಕೆ, ಶಾಲಾ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ ಎಸ್, ಶಕ್ತಿ ವಸತಿ ಶಾಲೆಯ ಪ್ರಾಚಾರ್ಯರಾದ ವಿದ್ಯಾಕಾಮತ್ ಜಿ, ಗೋಪಾಲಕೃಷ್ಣ ಪ್ರಿ-ಸ್ಕೂಲ್‌ನ ಸಹ-ನಿರ್ದೇಶಕರಾದ ನಿಮಾ ಸಕ್ಸೇನಾ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಹೆತ್ತವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.