Shakthi Residential School, Shakthinagar, Mangalore hosted an online drawing competition for the students to mark the World Environment day Celebration. The Competition was held in two categories. The primary students were asked to sketch the benefits of lockdown period while the Higher group was given the topic ‘Nature-Before and during the lockdown period.’
Students contributed their imagination very enthusiastically as much as they do for the regular online sessions for almost a month now. With the intention of developing a good rapport with the students to see that the study curve does not decline, this would be a continuous affair until the school re-opens, said Vidya Kamath G the principal. Poornesh the Art-Teacher was the co-ordinator and organised the event successfully.
ಶಕ್ತಿ ವಸತಿ ಶಾಲೆಯಲ್ಲಿ ಆನ್‌ಲೈನ್ ಚಿತ್ರಕಲಾ ಸ್ಪರ್ಧೆ
ಶಕ್ತಿ ವಸತಿ ಶಾಲೆ ಶಕ್ತಿನಗರ ಮಂಗಳೂರು ಇಲ್ಲಿನ ವಿದ್ಯಾರ್ಥಿಗಳಿಗೆ ಪರಿಸರ ದಿನಾಚರಣೆಯ ಅಂಗವಾಗಿ ಆನ್‌ಲೈನ್ ಚಿತ್ರಕಲಾ ಸರ್ಧ್ಪೆಯು ಏರ್ಪಟ್ಟಿತ್ತು. ಸ್ಪರ್ಧೆಯು ಎರಡು ವಿಭಾಗದಲ್ಲಿ ನಡೆದಿದ್ದು 1-5 ತರಗತಿಯ ವಿದ್ಯಾರ್ಥಿಗಳಿಗೆ ಲಾಕ್‌ಡೌನ್‌ನ ಸದ್ಬಳಕೆ ಎಂಬ ವಿಷಯ ಮತ್ತು 6-9 ನೇ ತರಗತಿಯ ವಿದ್ಯಾರ್ಥಿಗಳಿಗೆ ಲಾಕ್‌ಡೌನ್‌ನ ಮೊದಲು ಮತ್ತು ನಂತರ ಎಂಬ ವಿಷಯದ ಮೇಲೆ ಸ್ಪರ್ಧೆಯನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಬಹಳ ಕಲಾತ್ಮಕವಾಗಿ ತಮ್ಮ ಚಿಂತನೆಯನ್ನು ಚಿತ್ರದ ಮೂಲಕ ಮೂಡಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ಆನ್‌ಲೈನ್ ತರಗತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ 1-9 ನೇ ತರಗತಿಯ ವಿದ್ಯಾರ್ಥಿಗಳು ಈ ಆನ್‌ಲೈನ್ ಚಿತ್ರಕಲಾ ಸ್ಪರ್ಧೆಯಲ್ಲೂ ಅಷ್ಟೇ ಉತ್ಸಾಹದಿಂದ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದ ಆಯೋಜನೆಯನ್ನು ಚಿತ್ರಕಲಾ ಅಧ್ಯಾಪಕರಾದ ಪೂರ್ಣೇಶ್ ಮಾಡಿದರು ಎಂದು ಶಾಲೆಯ ಪ್ರಾಂಶುಪಾಲೆ ಶ್ರೀಮತಿ ವಿದ್ಯಾ ಕಾಮತ್ ಜಿ. ತಿಳಿಸಿದ್ದಾರೆ.