Mangalore: Shakthi Residential School at Shakthinagar, with the co-operation of the Dept. of Public Instructions B.E.O. South Mangaluru is going to conduct a seminar on New Education Policy on 22nd February from 09:30 am to 12:30 pm. Dr.Mahabaleshwar Rao, a well known educationist and the co-ordinator of Dr. TMA Pai College of Education Udupi will be the resource person. Dr.Prashanth Kumar, the B.E.O. of Mangaluru South will inaugurate the programme and Mr. K.C. Naik will preside over the inaugural function.
Circulars and messages have already been sent to all the Pre-Primary and the Primary School teachers and those who are not yet aware of the programme can register their names the same day and attend the programme said the Principal of the School in a press note.
ಹೊಸ ಶಿಕ್ಷಣ ನೀತಿಯ ಕುರಿತಾಗಿ ವಿಚಾರ ಸಂಕಿರಣ
ಮಂಗಳೂರು : ಫೆಬ್ರವರಿ ದಿನಾಂಕ 22 ರಂದು ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಹೊಸ ಶಿಕ್ಷಣ ನೀತಿಯ ಕುರಿತಂತೆ ಪೂರ್ವಾಹ್ನ 9.30 ರಿಂದ ಮಧ್ಯಾಹ್ನ 12.30 ರ ತನಕ ವಿಚಾರ ಸಂಕಿರಣ ನಡೆಯಲಿದೆ.
ಹೆಸರಾಂತ ಶಿಕ್ಷಣ ತಜ್ಞ ಉಡುಪಿಯ ಡಾ. ಟಿ.ಎಂ.ಎ ಪೈ ಶಿಕ್ಷಣ ಮಹಾವಿದ್ಯಾಲಯದ ಸಂಯೋಜಕ ಡಾ. ಮಹಾಬಲೇಶ್ವರ ರಾವ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರು ದಕ್ಷಿಣ ವಲಯದಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಪ್ರಶಾಂತ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು ಹಾಗೂ ಶ್ರೀ ಕೆ.ಸಿ ನಾಕ್ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರೆಂದು ಪ್ರಾಚಾರ್ಯರಾಗಿರುವ ವಿದ್ಯಾ ಕಾಮತ್ ಜಿ. ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಲಾಭವನ್ನು ಪ್ರಥಮ ಹಂತದಲ್ಲಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸದ್ಯಸರು ಪಡೆಯಬಹುದು. ಈ ಮಾಹಿತಿಯನ್ನು ಪಡೆಯದೆ ಇದ್ದವರು ಕೂಡ ಅದೇ ದಿನ ಬೆಳಿಗ್ಗೆ 9 ಕ್ಕೆ ಬಂದು ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.