ಕ್ರಿಸ್‌ಮಸ್ ಒಂದು ಧರ್ಮದ ಮನೋಭಾವದ ಜನರ ಹಬ್ಬವಲ್ಲ, ಹಬ್ಬವನ್ನು ಆಚರಿಸಲು ಯಾವುದೇ ಜಾತಿ, ಧರ್ಮ, ವಯೋಮಿತಿಯ ಜನರ ಅಗತ್ಯವಿಲ್ಲ. ಯಾವುದೇ ಧರ್ಮದ ಜನರು ಹೆಣ್ಣು, ಗಂಡು, ದೊಡ್ಡವರು, ಚಿಕ್ಕವರು ಎನ್ನುವ ಭೇಧವಿಲ್ಲದೆ ದೇಶದಾದ್ಯಂತ ಎಲ್ಲರೂ ಖುಷಿ, ಸಂಭ್ರಮದಿಂದ ಆಚರಿಸಬಹುದಾದ ಹಬ್ಬ ಎಂದು ಶಕ್ತಿ ವಸತಿ ಶಾಲೆಯಲ್ಲಿ ನಡೆದ ಕ್ರಿಸ್‌ಮಸ್ ದಿನಾಚರಣೆಯನ್ನು ಕುರಿತು ಮಾತನಾಡಿದರು. ದೇವರೊಬ್ಬ ನಾಮ ಹಲವು ಎನ್ನುವಂತೆ ಎಲ್ಲರೂ ಪರಸ್ಪರ ಗೌರವ, ಪ್ರೀತಿ, ವಿಶ್ವಾಸದಿಂದ ಬದುಕುತ್ತ ಎಲ್ಲರ ಅಭಿಪ್ರಾಯ, ಭಾವನೆ, ಆಚಾರ ವಿಚಾರಗಳನ್ನು ಗೌರವಿಸಿ ಬದುಕಿದಾಗ, ದೇಶ ಸಮೃದ್ಧವಾಗುತ್ತದೆ ಎಂದರು.
ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ. ಶಾಲೆ ಹಲವು ಧರ್ಮದ ವಿದ್ಯಾರ್ಥಿಗಳನ್ನು ಒಳಗೊಂಡ ಒಂದು ಕೇಂದ್ರ ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳು ಹಲವಾರು ಧರ್ಮ, ಧಾರ್ಮಿಕ, ನಂಬಿಕೆ, ಆಚಾರ ವಿಚಾರಗಳ ಬಗ್ಗೆ ಅರಿವು, ಗೌರವವನ್ನು ಬೆಳೆಸಿಕೊಳ್ಳಬೇಕು. ಈ ಮೂಲಕ ದೇಶದ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.
ವಿದ್ಯಾರ್ಥಿಗಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಟ್ಟವು. ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರಾದ ಕೆ.ಸಿ ನಾೖಕ್, ಶಕ್ತಿ ಎಜ್ಯುಕೇಶನ್ ಟ್ರಸ್ಟ್ರ್‌ನ ಅಭಿವೃದ್ಧಿ ಅಧಿಕಾರಿ ಪ್ರಕ್ಯಾತ್ ರೈ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ.ಎಸ್ ಉಪಸ್ಥಿತರಿದ್ದರು.