ಯಾವುದೇ ಒಂದು ತರಬೇತಿ ಯಶಸ್ವಿಯಾಗುವುದು ತರಬೇತಿದಾರರು ಅದರ ಪ್ರಯೋಜನ ಪಡೆದುಕೊಂಡಾಗ ಅದೇ ರೀತಿ ವಿದ್ಯಾರ್ಥಿಗಳು ನಾವು ಕೊಡುವಂತಹ ತರಬೇತಿಯ ಪ್ರಯೋಜನವನ್ನು ಪಡೆದು ಕೊಂಡಿದ್ದು, ಜೀವನದುದ್ದಕ್ಕೂ ಅಳವಡಿಸಬೇಕು. ಇಂಗ್ಲೀಷ್ ಭಾಷೆ ಸರ್ವ ಜನರ ಜೀವನಾಡಿಯ ಭಾಷೆ ಪ್ರಪಂಚದಾದ್ಯಂತ ಎಲ್ಲಾ ವ್ಯವಹಾರಗಳು ಇಂಗ್ಲೀಷ್ ಭಾಷೆಯೊಂದಿಗೆ ನಡೆಯುತ್ತಿದೆ. ಆದುದರಿಂದ ವ್ಯಾಕರಣ ಬದ್ಧವಾದ ಮತ್ತು ಕ್ರಮಬದ್ಧವಾದ ಇಂಗ್ಲೀಷ್ ಸಂವಹನವಿದ್ದರೆ, ಸಮಾಜದಲ್ಲಿ ಒಳ್ಳೆಯ ಗೌರವ ಸಿಗುತ್ತದೆ. ಎಂದು ಸುನಿತ ಪಿರೇರ ಹೇಳಿದರು.
ಶಕ್ತಿ ವಸತಿ ಶಾಲೆಯಲ್ಲಿ English across the curriculum today, Enact ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು. ಕಳೆದ ಜೂನ್ ತಿಂಗಳಿನಿಂದ 12 ವಾರಗಳ ಶಾಲೆಯ ವಿದ್ಯಾರ್ಥಿಗಳ ಇಂಗ್ಲೀಷ್ ಭಾಷೆಯಲ್ಲಿನ ಗುಣಮಟ್ಟದಲ್ಲಿನ ಹೆಚ್ಚಳದ ಉದ್ದೇಶದಿಂದ Enact ತರಬೇತಿಯನ್ನು ನಡೆಸಲಾಗುತ್ತಿತ್ತು. ಪ್ರತೀ ಶನಿವಾರ ಶಾಲೆಯಲ್ಲಿ ನಡೆಸಲಾಗುವ ಕರಾಟೆ, ಚಿತ್ರಕಲೆ ಮೊದಲಾದ ಪಠ್ಯೇತರ ಚಟುವಟಿಕೆಯ ಜೊತೆಗೆ ಈ ತರಬೇತಿ ಕಾರ್ಯಗಾರ ಪ್ರತೀ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಉಚಿತವಾಗಿ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳಿಗೆ ಸ್ಪಷ್ಟ ಹಾಗೂ ಕ್ರಮಬದ್ಧ ಇಂಗ್ಲೀಷ್ ಉಚ್ಛಾರಣೆ ಹಾಗೂ ವ್ಯಾಕರಣ ಬದ್ಧವಾಗಿ ಇಂಗ್ಲೀಷ್ ಬರವಣಿಗೆ ಕೇಳು-ಓದು-ಬರೆ ಎನ್ನುವ ಪರಿಕಲ್ಪನೆಯಡಿಯಲ್ಲಿ ಕಲಿಸಿಕೊಡಲಾಗುತ್ತಿತ್ತು.
ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುತ್ತ ತಮಗೆ ಕೊಟ್ಟ ಪ್ರಶ್ನಾವಳಿಗಳಿಗೆ ಸರಿಯಾಗಿ ಉತ್ತರಿಸುತ್ತ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ತಾವು ತರಬೇತಿಯಿಂದ ಪಡೆದ ಪ್ರಯೋಜನಗಳನ್ನು, ತಮ್ಮ ಅನಿಸಿಕೆಗಳ ಮೂಲಕ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಅಮಿತ, ವಾನಿ ಉಮ್ಮಕ್ಕ, ಒಲಿವಿಯ ಮತ್ತು ಮೇರಿ ಭಾಗವಹಿಸಿದರು.
ವೇದಿಕೆಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ ನಾೖಕ್, ಶಕ್ತಿ ವಸತಿ ಶಾಲೆಯ ಶಿಕ್ಷಕಿ ವಿದ್ಯಾ ಕಾಮತ್ ಜಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಧ್ವನಿ ಸ್ವಾಗತಿಸಿ, ವಿದ್ಯಾರ್ಥಿನಿ ಗ್ಲೋರಿ ವಂದಿಸಿದರು ಹಾಗೂ ವಿದ್ಯಾರ್ಥಿ ಅನೂಪ್ ನಿರೂಪಿಸಿದರು.