ಶಕ್ತಿ ನಗರದಲ್ಲಿರುವ ಶಕ್ತಿ ವಸತಿ ಶಾಲೆಯಲ್ಲಿ 2023-24 ನೇ ಸಾಲಿನ ಹತ್ತನೇ ತರಗತಿಯ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭವು ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ನೆರವೇರಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ ಹೆಚ್ ಅವರು ದೀಪವನ್ನು ಬೆಳಗಿಸಿ ನಂತರ ಮಾತನಾಡಿದ ಅವರು “ಜೀವನದಲ್ಲಿ ಶಿಕ್ಷಣದ ಜೊತೆಗೆ ಶಿಸ್ತನ್ನು ಕಲಿಯಬೇಕು. ಭವಿಷ್ಯದ ಜೀವನದಲ್ಲಿ ಶಿಕ್ಷಕರನ್ನು ಸ್ಮರಿಸಿಕೊಳ್ಳುತ್ತಾ ಸಾಧನೆಯ ಕಡೆಗೆ ಮುಂದೆ ಸಾಗಬೇಕು. ಅನುಭವ ಅನ್ನೋದು ದೊಡ್ಡದು, ವಿದ್ಯಾರ್ಥಿಯಾಗಿದ್ದಾಗಲೇ ಪ್ರಶ್ನಿಸುವ ಗುಣವನ್ನು ಕಲಿಯಬೇಕು. ಆಗ ನೀವು ಜ್ಞಾನದ ಸಾಗರವಾಗಲೂ ಸಾಧ್ಯ ಎಂದು ಹೇಳಿ ಮಕ್ಕಳ ಭವಿಷ್ಯಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ಅವರು ಮಾತನಾಡಿ “ನಾವು ಜೀವನದಲ್ಲಿ ಅಕ್ಷರ ಕೊಟ್ಟವರನ್ನು ಮತ್ತು ಅನ್ನ ಕೊಟ್ಟವರನ್ನು ಮರೆಯಬಾರದು. ನಮಗೆ ಅಕ್ಷರ ಕೊಟ್ಟು ಬುದ್ದಿ ಹೇಳಿದ ನಮ್ಮ ಶಿಕ್ಷಕರನ್ನು ಜೀವನದಲ್ಲಿ ಯಾವತ್ತೂ ಮರೆಯಬಾರದು. ಸಾಧನೆ ಮಾಡಿದ್ರೆ ಸಮಾಜದಲ್ಲಿ ನಮ್ಮ ಹೆಸರಿಂದ ನಮ್ಮ ತಂದೆ ತಾಯಿಯರನ್ನು ಗುರುತಿಸುವ ಹಾಗೆ ಮಾಡಬೇಕು. ಜೀವನದಲ್ಲಿ ನಮ್ಮ ಪೋಷಕರು ಮಾಡಿದ ಸಾಧನೆಯನ್ನು ಮೀರಿಸುವಂತೆ ನಾವು ಬಾಳಬೇಕು ಎಂದು ಹೇಳಿ ಮಕ್ಕಳಿಗೆ ಶುಭ ಹಾರೈಸಿದರು.
ನಂತರ ಶಕ್ತಿ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ ಅವರು ಮಾತನಾಡಿ “ನಾವು ಸಮಾಜದಿಂದ ಶಿಕ್ಷಣವನ್ನು ಪಡೆದು, ಇದೆ ಸಮಾಜಕ್ಕೆ ನಾವು ಉತ್ತಮ ಕೊಡುಗೆಯನ್ನು ಕೊಡುವಂತ ಸಂಸ್ಕಾರವನ್ನು ನಾವೆಲ್ಲಾ ರೂಢಿಸಿಕೊಳ್ಳಬೇಕು ಹಾಗಾದಾಗ ಮಾತ್ರ ನಮಗೆ ಕಲಿಸಿದ ಗುರುಗಳ ಶ್ರಮಕ್ಕೆ ಸಾರ್ಥಕತೆ ಸಿಕ್ಕಂತಾಗುತ್ತದೆ. ನಿಮ್ಮ ಭವಿಷ್ಯದ ಜೀವನ ದೀಪದಂತೆ ಪ್ರಜ್ವಲಿಸಲಿ ನಿಮ್ಮ ಗುರಿಯ ಕಡೆ ನಿಮ್ಮ ಗಮನವಿರಲಿ. ತಂದೆ ತಾಯಿಯರಿಗೆ ಮತ್ತು ನಿಮಗೆ ವಿದ್ಯೆ ನೀಡಿದ ಶಾಲೆಗೆ ಗೌರವ ತರುವಂತಹ ಸಾಧನೆ ಮಾಡಿ” ಎಂದು ಮಕ್ಕಳಿಗೆ ಕಿವಿ ಮಾತನ್ನು ಹೇಳಿದರು.
ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಮತ್ತು ವಿವಿಧ ಮನರಂಜನೆಯ ಆಟಗಳು ಜರುಗಿದವು.
ಹತ್ತನೆಯ ತರಗತಿಯ ಮಕ್ಕಳೆಲ್ಲರೂ ಸೇರಿ ಕಲಿತ ಶಾಲೆಗೆ ಉಡುಗೊರೆಯನ್ನು ನೀಡಿದರು ಮತ್ತು ಅನಾಥಾಶ್ರಮಕ್ಕೆ ಧನ ಸಹಾಯವನ್ನು ಮಾಡುವುದರ ಮೂಲಕ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ಶಿಕ್ಷೆಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ನಂದಿಕಾ ದೇಸಾಯಿ ನಡೆಸಿದರು. ನಿಶಿತಾ ಸ್ವಾಗತಿಸಿದರು. ಅಭಯ್ ವಂದನಾರ್ಪಣೆಯನ್ನು ಸಲ್ಲಿಸಿದರು.