ಮಂಗಳೂರು ಆ. 29 : ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಇಂದು ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆಯಾಗಿ ಆಚರಿಸಲಾಯಿತು. ಮೇಜರ್ ಧ್ಯಾನ್ ಚಂದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಲ್ಲಡ್ಕ ಶ್ರೀ ರಾಮ ಪಪೂ ಕಾಲೇಜಿನ ದೈಹಿಕ ನಿರ್ದೇಶಕರಾದ ಕರುಣಾಕರ ಉದ್ಘಾಟಿಸಿದರು.
ನಂತರ ಮಾತನಾಡಿದ ಕರುಣಾಕರ ಮೇಜರ್ ದ್ಯಾನ್ ಚಂದ್ ಹಾಕಿಯನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಆಡುವುದರ ಮೂಲಕ ಭಾರತಕ್ಕೆ ಗೆಲುವು ತಂದುಕೊಡುತ್ತಿದ್ದರು. ಅವರಿಗೆ ಆಟದ ಮೇಲೆ ಶ್ರದ್ಧೆ ಮತ್ತು ಭಕ್ತಿ ಇರುತ್ತಿತ್ತು. ಇದರಿಂದಾಗಿ ಜಗತ್ತು ಅವರ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿತು. ಹಿಟ್ಲರನು ಮೇಜರ್ ಧ್ಯಾನ್ ಚಂದ್‌ನ ಕ್ರೀಡಾ ಆಸಕ್ತಿಯನ್ನು ಗುರುತಿಸಿ ತಮ್ಮ ದೇಶದ ಪೌರತ್ವ ನೀಡಿ ಉನ್ನತ ಹುದ್ದೆ ನೀಡಲು ಬಯಸಿದರು. ಆದರೆ ಅವರು ಅದನ್ನು ಸ್ವೀಕರಿಸಲಿಲ್ಲ ದೇಶ ಭಕ್ತಿಯನ್ನು ಪ್ರದರ್ಶಿಸಿದರು. ಈ ಮೂಲಕ ಇತರ ಹಾಕಿ ಆಟಗಾರರಿಗೆ ಪ್ರೇರಣೆ ನೀಡಿದರು. ಜಗತ್ತು ಭಾರತದ ಹಾಕಿ ಆಟವನ್ನು ನೋಡುವಾಗೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್ ಮಾತನಾಡಿ ನಾವೆಲ್ಲರೂ ಕ್ರೀಡೆಯನ್ನು ಪ್ರೀತಿಸಬೇಕು ಹಾಗೂ ಅದರಲ್ಲಿ ಭಾಗವಹಿಸಬೇಕು. ಮೇಜರ್ ಧ್ಯಾನ್ ಚಂದ್‌ರ ಕ್ರೀಡಾ ಶಕ್ತಿಯನ್ನು ಮೈಗೂಡಿಸಬೇಕೆಂದು ಕರೆ ನೀಡಿದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಉಪಸ್ಥಿತರಿದ್ದರು. ಕನ್ನಡ ಅಧ್ಯಾಪಕ ಶರಣಪ್ಪ ನಿರೂಪಿಸಿದರು.