Call Us :
+91 96860 00046
CBSE

Shakthi Education Trust

+91 9108043552
info@shakthi.edu.in

Annual Day Sports at Shakthi Institutions

The Students in schools and colleges should not aim only at academic excellence, but also give due importance to sports and games. A sound mind in a sound body. Participation in games and sports makes the students to have a sound mind too – said Sri Purushothama Poojary, the retired Physical Education Director of Shree Gokarnanatheshwara College. He was addressing the students after inaugurating the sports meet. He said that students should not be discouraged when they do not win. Every failure is a stepping stone for the success. Regular practice makes the students perfect in any of the games and sports. Participation in sports and games will never hinder their studies. It helps the students to inculcate self- discipline.

Mr. Baikady Janardana Achar, the administrator of Shakthi Education Trust, speaking on the occasion told the students that the goal of education is to promote friendship, integrity and discipline. The students should utilize the opportunities given to them in the school and aim at achieving something great in their lives. A balanced growth of mind and body is very essential for personality development, he said.

Sri. K.C. Naik, the Managing Trustee of Shree Gopalakrishna Temple, Prabhakara G.S, the Principal of Shakthi PU College, Smt. Vidya Kamath G, the Principal of Shakthi Residential School, Prakhyath Rai, the Institution Development Officer, Neema Saxena, the Co-ordinator of Shree Gopalakrishna Pre-School were present.

The Principal of the School welcomed the dignitaries and the audience. Mr. Srinivas, the Physical Education Director proposed the vote of thanks. Smt. Divya Jyothi, the Lecturer compered the programme.

ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾ ದಿನಾಚರಣೆ

ವಿದ್ಯಾರ್ಥಿಗಳು ಶಾಲೆಯ ದಿನಗಳನ್ನು ಕೇವಲ ಶೈಕ್ಷಣಿಕ ಸಾಧನೆಗಷ್ಟೆ ಮೀಸಲಿಡದೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಳ್ಳಬೇಕು. ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಶಕ್ತಿನಗರದ ಶಕ್ತಿ ವಸತಿ ವಸತಿ ಶಾಲೆ ಹಾಗೂ ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸ್ಪರ್ಧಾಕೂಟವನ್ನು ಉದ್ಘಾಟಿಸಿದ ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಕರಾದ ಪುರುಷೋತ್ತಮ ಪೂಜಾರಿ ಹೇಳಿದರು. ವಿದ್ಯಾರ್ಥಿಗಳು ಸ್ಪರ್ಧೆಯನ್ನು ಕೇವಲ ಸ್ಪರ್ಧೆಯ ನಿಯಮಾವಳಿಗಳಲ್ಲಿ ಪರಿಗಣಿಸಬೇಕು. ಸೋಲು ಗೆಲುವುಗಳು ಬಂದಾಗ ಹಿಗ್ಗದೆ ಅಥವಾ ಕುಗ್ಗದೆ ಮುಂದಿನ ಅವಕಾಶಕ್ಕಾಗಿ ಎದುರು ನೋಡಬೇಕು. ಶಾಲೆಯಲ್ಲಿ ಎನ್.ಸಿ.ಸಿ, ವ್ಯಾಯಾಮ, ಕಬಡ್ಡಿಗಳಂತಹ ಕ್ರೀಡೆಗಳಿಗೆ ಮಹತ್ವ ನೀಡುವುದರ ಮೂಲಕ ಮಕ್ಕಳಲ್ಲಿ ಶಿಸ್ತನ್ನು ಮೂಡಿಸಬೇಕು ಎಂದು ಹೇಳಿದರು.

ಶಕ್ತಿ ಶಾಲೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವದೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಶಾಲೆಯಲ್ಲಿ ಸಿಗುವ ಅವಕಾಶಗಳ ಸದುಪಯೋಗವನ್ನು ಪಡೆದು ಉತ್ತಮ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಕಾರ್ಯೋನ್ಮುಖರಾಗಬೇಕು. ಶಾಲೆಯಲ್ಲಿನ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಲ್ಲಿ ಭಾಗವಹಿಸುವುದರ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಬುದ್ಧಿಮಟ್ಟವನ್ನು ಹೆಚ್ಚಿಸಬೇಕು ಎಂದರು.

ಉದ್ಘಾಟಕರು ಕ್ರೀಡಾಜ್ಯೋತಿಯನ್ನು ಬೆಳಗಿಸಿ ಬೆಲೂನ್ ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ರೀಡಾ ದಿನದ ಪ್ರಯುಕ್ತ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ ನಾೖಕ್‌, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ, ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್‌ ರೈ, ಪ್ರಧಾನ ಸಲಹೆಗಾರ ರಮೇಶ ಕೆ, ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ.ಎಸ್, ಶ್ರೀ ಗೋಪಾಲಕೃಷ್ಣ ಪ್ರಿ ಸ್ಕೂಲ್‌ನ ಸಂಯೋಜಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಕ್ತಿ ವಸತಿ ಶಾಲೆ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ. ಸ್ವಾಗತಿಸಿ, ಶಕ್ತಿ ಪದವಿ ಪೂರ್ವಕಾಲೇಜಿನ ಉಪನ್ಯಾಸಕಿ ದಿವ್ಯಜ್ಯೋತಿ ಇವರು ನಿರೂಪಿಸಿ ಶಕ್ತಿ ಶಾಲೆಯ ಶಾರೀರಿಕ ಶಿಕ್ಷಣ ಶಿಕ್ಷಕ ಶ್ರೀನಿವಾಸ ವಂದಿಸಿದರು.

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

  Mrs. Babitha Suraj Principal Mrs. Sushma Satish Coordinator –...