Call Us :
+91 96860 00046
CBSE

Shakthi Education Trust

+91 9108043552
info@shakthi.edu.in

ವಿಶ್ವ ಯೋಗ ದಿನಾಚರಣೆ

ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಕ್ರೀಡಾ ಭಾರತಿ ಮಂಗಳೂರು ಮತ್ತು ಶಕ್ತಿ ವಿದ್ಯಾ ಸಂಸ್ಥೆಯ ಸಹಭಾಗಿತ್ವದಲ್ಲಿ ಸಾಮೂಹಿಕವಾಗಿ ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ಅರ್ಥ ಪೂರ್ಣವಾಗಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯೆನಪೋಯ ವಿಶ್ವವಿದ್ಯಾನಿಲಯ ಮಂಗಳೂರು ಇಲ್ಲಿ ಪ್ರಕೃತಿ ಚಿಕಿತ್ಸ ಮತ್ತು ಯೋಗ ವೈದ್ಯರು ಆಗಿರುವ ಐಶ್ವರ್ಯ ಶೆಟ್ಟಿ ಅವರು ದೀಪವನ್ನು ಬಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು “ಇಂದು ವಿಶ್ವದಲ್ಲಿ 177 ಕ್ಕೂ ಹೆಚ್ಚಿನ ದೇಶಗಳು ಈ ಯೋಗದಿನಾಚರಣೆಯನ್ನು ಆಚರಿಸುತ್ತಿವೆ. ನಮ್ಮ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿಯವರ ನಿರ್ಧಾರದಿಂದ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ಯೋಗ ಇಂದು ವಿಶ್ವವೇ ಆಚರಿಸುವಂತೆ ಆಗಿದೆ. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿರಬೇಕು ಅಂದರ ನಾವು ವಿವಿಧ ಯೋಗಾಸನಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳಾದ ನಾವು ನಮ್ಮ ದಿನನಿತ್ಯ ಜೀವನದಲ್ಲಿ ಯೋಗಾಸನಗಳನ್ನು ಅಭ್ಯಾಸ ಮಾಡಬೇಕು. ಪ್ರತಿ ದಿನ ಪ್ರಯತ್ನದೊಂದಿಗೆ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಸಿಗುವ ಹಾಗ ದಿನನಿತ್ಯ ಯೋಗಭ್ಯಾಸದಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ. ದೈಹಿಕ ದೃಢತೆ ಇರುತ್ತದೆ. ವಿದ್ಯಾರ್ಥಿಯಲ್ಲಿ ಇರಬೇಕಾದ ಮುಖ್ಯ ಲಕ್ಷಣ ಅಂದರೆ ಕಾಗೆಯ ಬುದ್ಧಿ, ಕೊಕ್ಕರೆಯ ಚುರುಕುತನ, ಶ್ವಾನದ ನಿದ್ರ, ಮಿತವಾದ ಆಹಾರ ಸೇವನೆ, ಹೀಗೆ ಈ ಲಕ್ಷಣಗಳು ವಿದ್ಯಾರ್ಥಿಯಲ್ಲಿರಬೇಕು. ಒಬ್ಬ ಸಾಧಕ ವಿದ್ಯಾರ್ಥಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಈ ಶಕ್ತಿ ವಿದ್ಯಾ ಸಂಸ್ಥೆಯು ಒದಗಿಸುತ್ತಾ ಬರುತ್ತಿದೆ. ಮಕ್ಕಳು ಚೆನ್ನಾಗಿ ವಿದ್ಯಾರ್ಜನೆಯನ್ನು ಮಾಡಿ ಸಂಸ್ಥೆಗೆ ಮತ್ತು ಹೆತ್ತವರಿಗ ಒಳ್ಳಯ ಕೀರ್ತಿ ತರುವಂತಾಗಲಿ ದೇಶದ ಸಂಪತ್ತಾಗಲಿ ಎಂದು ಶುಭ ಹಾರೈಸಿದರು.

ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ. ಮಾತನಾಡಿ ಶಕ್ತಿ ವಿದ್ಯಾ ಸಂಸ್ಥೆಯ ವಸತಿ ನಿಲಯದಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಬೆಳಗ್ಗಿನ ಅವಧಿಯಲ್ಲಿ ಪ್ರತಿನಿತ್ಯವು ಯೋಗವನ್ನು ಅಭ್ಯಾಸ ಮಾಡುತ್ತಾರೆ. ಇದರಿಂದ ಅವರ ಕಲಿಯುವಿಕೆ ಈ ಪದ್ಧತಿಯು ಹೆಚ್ಚು ಅನುಕೂಲಕರವಾಗಿದೆ ಎಂದು ಹೇಳಿದರು. ಪ್ರತಿ ವರ್ಷವು ಕ್ರೀಡಾ ಭಾರತಿ ಸಹಕಾರದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ರಥ ಸಪ್ತಮಿ ನಮ್ಮ ಸಂಸ್ಥೆಯಲ್ಲಿ ನಡೆಯುತ್ತಿರುವುದು ಶ್ಲಾಘನೀಯವಾಗಿದೆ. ಅಂತರಾಷ್ಟ್ರೀಯ ಯೋಗಾ ದಿನಾಚರಣಯಿಂದ ನಾವು ದಿನನಿತ್ಯ ಯೋಗಾವನ್ನು ಅಭ್ಯಾಸ ಮಾಡಬೇಕೆಂದು ಅವರು ಹೇಳಿದರು.
ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ 5 ನೆ ತರಗತಿಯಿಂದ ಪಿಯುಸಿ ತರಗತಿಯವರಗಿನ ಎಲ್ಲಾ ವಿದ್ಯಾರ್ಥಿಗಳು ಏಕಕಾಲದಲ್ಲಿ ಪವನ ಮುಕ್ತಾಸನ, ಮಕರಾಸನ, ತಾಡಾಸನ, ಭುಜಂಗಾಸನ, ವೃಕ್ಷಾಸನ ವಿವಿಧ ಯೋಗಾಸನಗಳನ್ನು ಮಾಡುವ ಮೂಲಕ ಯೋಗಾಭ್ಯಾಸವನ್ನು ನಡೆಸಿದರು. ಯೋಗ ತರಬೇತುದಾರರಾದ ಶ್ರೀಮತಿ ವೀಣಾ ಮತ್ತು ಸುಭದ್ರಾ ಅವರು ಯೋಗಭ್ಯಾಸದ ತರಬೇತಿ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಕ್ರೀಡಾಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ಇದರ ಉಪಾಧ್ಯಕ್ಷರಾಗಿರುವ ಶ್ರೀ ಕಾರಿಯಪ್ಪ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರೀಡಾ ಭಾರತಿ ಕರ್ನಾಟಕ, ದಕ್ಷಿಣ ಪ್ರಾಂತ ಇದರ ಆತ್ಮ ರಕ್ಷಕ ಪ್ರಮುಖ್ ಆಗಿರುವ ಶ್ರೀ ಎ ಕೃಷ್ಣ ಶೆಟ್ಟಿ ತಾರಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇಲಂಪಾಡಿ ಯೋಗ ಪ್ರತಿಷ್ಠಾನದ ಸದಸ್ಯರು ಮತ್ತು ಯೋಗ ತರಬೇತುದಾರರಾದ ಶ್ರೀಮತಿ ವೀಣಾ ಮತ್ತು ಸುಭದ್ರಾ ಉಪಸ್ಥಿತರಿದ್ದರು. ಶಕ್ತಿ ವಸತಿ ಶಾಲೆ ಪ್ರಾಂಶುಪಾಲೆ ಸುರೇಖಾ ಭಟ್ ಸ್ವಾಗತಿಸಿ, ಕನ್ನಡ ಶಿಕ್ಷಕರಾದ ಶರಣಪ್ಪ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

  Mrs. Babitha Suraj Principal MSc, B.Ed 25 Years’ Experience...