Call Us :
+91 96860 00046
CBSE

Shakthi Education Trust

+91 9108043552
info@shakthi.edu.in

ಅಂತರರಾಷ್ಟ್ರೀಯ ಗ್ರೀನ್ವಿಚ್ ಒಲಿಂಪಿಯಾಡ್‌ನಲ್ಲಿ ಶಾಸ್ತಾ ನಾೖಕ್‌ ವರ್ಕಾಡಿ ಅವರಿಗೆ ಕಂಚಿನ ಪದಕ

ಇತ್ತೀಚೆಗೆ ಉತ್ತರ ಲಂಡನಿನ ಗ್ರಾಮರ್ ಸ್ಕೂಲ್ ಕ್ವೀನ್ ಮೇರಿ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರಾಷ್ಟ್ರೀಯ ಗ್ರೀನ್ವಿಚ್ ಒಲಿಂಪಿಯಾಡ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಶಾಸ್ತಾ ನಾೖಕ್‌ ವರ್ಕಾಡಿ ಅವರು ಲಂಡನ್‌ನಲ್ಲಿ ನಡೆದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಗ್ರೀನ್ವಿಚ್ ಒಲಿಂಪಿಯಾಡ್ (ಐಜಿಒ) 2026ರಲ್ಲಿ ಕಂಚಿನ ಪದಕವನ್ನು ಗಳಿಸಿದ್ದಾರೆ. 58 ದೇಶಗಳಿಂದ 510 ಯುವ ವಿಜ್ಞಾನಿಗಳನ್ನು ಒಟ್ಟುಗೂಡಿಸಿದ ಈ ಜಾಗತಿಕ ಸಮಾರಂಭದಲ್ಲಿ ಅವರ ಸಾಧನೆಯು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಗಮನಾರ್ಹ ಸಾಧನೆಯಾಗಿದೆ.

ತಮ್ಮ ನವೀನ ಕೃತಕ ಬುದ್ಧಿಮತ್ತೆ (AI) ಆಧಾರಿತ ಬಹು-ಕೃಷಿ ರೋಬೋಟಿಕ್ ವ್ಯವಸ್ಥೆಗಾಗಿ ಶಾಸ್ತಾ ಅವರು ಈ ಗೌರವವನ್ನು ಗಳಿಸಿದ್ದಾರೆ. ಇದು ರೈತರು ಬಹು ಕೃಷಿ ಕಾರ್ಯಾಚರಣೆಗಳನ್ನು ಸಮರ್ಥವಾಗಿ ನಿರ್ವಹಿಸಲು ನೆರವಾಗುವಂಥ ಸ್ಮಾರ್ಟ್ ತಂತ್ರಜ್ಞಾನವಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್ ಅನ್ನು ಸಂಯೋಜಿಸಿರುವ ಈ ಮಾದರಿಯು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ, ಮಾನವ ಶ್ರಮವನ್ನು ಕಡಿಮೆ ಮಾಡುವ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಇದರ ಪ್ರಾಯೋಗಿಕ ಅನ್ವಯಗಳು, ನವೀನ ವಿನ್ಯಾಸ ಮತ್ತು ನೈಜ ಕೃಷಿ ಸವಾಲುಗಳನ್ನು ಎದುರಿಸುವ ಸಾಮರ್ಥ್ಯಕ್ಕೆ ಅಂತಾರಾಷ್ಟ್ರೀಯ ತೀರ್ಪುಗಾರರು ಮೆಚ್ಚುಗೆಯನ್ನು ವ್ಯಕ್ತಪಡಿಸದರು.

ಈ ಪ್ರಾಜೆಕ್ಟನ್ನು ಭಾರತ ವಿಜ್ಞಾನ ಸೊಸೈಟಿಯ ನಿರ್ದೇಶಕರಾದ ನಾರಾಯಣ ಅಯ್ಯರ್ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಯುವ ನಾವೀನ್ಯಕಾರರ ದೃಷ್ಟಿಕೋನ ಮತ್ತು ಸಂಶೋಧನೆಯನ್ನು ಪರಿ?ರಿಸುವಲ್ಲಿ ಅವರ ಮಾರ್ಗದರ್ಶನವು ಪ್ರಮುಖ ಪಾತ್ರ ವಹಿಸಿದೆ. ಶಾಸ್ತಾ ಅವರು ಶ್ರೀನಾಥ್ ನಾಕ್ ಮತ್ತು ಚಂದ್ರಿಕಾ ಶ್ರೀನಾಥ್ ನಾಕ್ ದಂಪತಿಯ ಪುತ್ರರಾಗಿದ್ದು, ಅವರ ನಿರಂತರ ಪ್ರೋತ್ಸಾಹ ಮತ್ತು ಬೆಂಬಲವು ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಶಾಸ್ತಾ ನಾಕ್ ಅವರು ಡಿಸೆಂಬರ್ ೪ರಂದು ಪುತ್ತೂರಿನ ವಿವೇಕಾನಂದ CBSE ಶಾಲೆಯಲ್ಲಿ ನಡೆದ ಪ್ರಾದೇಶಿಕ ಮಟ್ಟದ ಇಂಡಿಯನ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಫೇರ್ (INSEF) ನಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದು ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದರು. 2026 ರ ಜನವರಿ 18 ರಂದು ಗುಜರಾತ್ ರಾಜ್ಯದ ಗೊಂಡಲ್‌ನ ಧೋಲಕಿಯಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಇಂಡಿಯನ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಫೇರ್ (INSEF) ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ಅಂತರರಾಷ್ಟ್ರೀಯ ಗ್ರೀನ್‌ವಿಚ್ ಒಲಿಂಪಿಯಾಡ್‌ಗೆ ಆಯ್ಕೆಯಾದರು.

ಈ ಸಾಧನೆಯು ಅವರ ಕುಟುಂಬ ಮತ್ತು ಶಾಲೆಗೆ ಕೀರ್ತಿ ತಂದಿತಲ್ಲದೆ, ಭಾರತದ ಯುವ ಪ್ರತಿಭೆಗಳ ಅಪಾರ ಪ್ರತಿಭೆ ಮತ್ತು ವೈಜ್ಞಾನಿಕ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಅವರ ಯಶಸ್ಸು ದೇಶಾದ್ಯಂತದ ಮಹತ್ವಾಕಾಂಕ್ಷಿ ನಾವೀನ್ಯಕಾರರಿಗೆ ಸ್ಫೂರ್ತಿಯಾಗಿದ್ದು, ಜಾಗತಿಕ ವಿಜ್ಞಾನ ಮತ್ತು ತಂತ್ರಜ್ಞಾನ ವೇದಿಕೆಗಳಲ್ಲಿ ಭಾರತದ ಬೆಳೆಯುತ್ತಿರುವ ಉಪಸ್ಥಿತಿಯನ್ನು ಗುರುತಿಸಿದೆ.

ಈ ಸಂದರ್ಭದಲ್ಲಿ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ವತಿಯಿಂದ ಶಾಸ್ತಾ ನಾೖಕ್‌ಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಂಸ್ಥೆಯ ಸಂಸ್ಥಾಪಕರಾದ ಡಾ ಕೆ. ಸಿ. ನಾೖಕ್‌ ಅವರು ಸಾವಿರಾರು ವಿದ್ಯಾರ್ಥಿಗಳ ಮುಂದೆ ಸಂಸ್ಥೆಯ ವತಿಯಿಂದ ಗೌರವಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ ಕೆ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಶ್ರೀ ಪ್ರದೀಪ್ ಶೆಟ್ಟಿ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಸುರೇಖ ಆರ್ ಭಟ್ ಉಪಸ್ಥಿತರಿದ್ದರು.

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

  Mrs. Babitha Suraj Principal MSc, B.Ed 25 Years’ Experience...