Call Us :
+91 96860 00046
CBSE

Shakthi Education Trust

+91 9108043552
info@shakthi.edu.in

ಶಕ್ತಿ ವಸತಿ ಶಾಲೆಯಲ್ಲಿ 5-16 ಏಪ್ರಿಲ್ 2024 ರವರೆಗೆ ಶಕ್ತಿ ಕ್ಯಾನ್ ಕ್ರಿಯೇಟ್-2024 ಬೇಸಿಗೆ ಶಿಬಿರದ ಆಯೋಜನೆ

ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶಕ್ತಿ ಕ್ಯಾನ್ ಕ್ರಿಯೇಟ್-2024 ಎಂಬ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಈ ಬೇಸಿಗೆ ಶಿಬಿರದಲ್ಲಿ ಎಲ್ ಕೆ ಜಿ ಯಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳು ನೋಂದಣಿ ಮಾಡಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಈ ಶಿಬಿರವು ದಿನಾಂಕ 5-4-2024  ರಿಂದ 16-4-2024  ರವರೆಗೆ ಶಕ್ತಿ ವಸತಿ ಶಾಲೆಯಲ್ಲಿ ನಡೆಯಲಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ವೇದಿಕೆ ಇದಾಗಿದೆ. ಒಟ್ಟು 5 ಗುಂಪುಗಳನ್ನು ಮಾಡಲಾಗಿದೆ.

ಮೊದಲ ಗುಂಪಿನಲ್ಲಿ ಯಕ್ಷಗಾನ, ಕಥಕ್, ಕುಣಿತ ಭಜನೆ, ನೃತ್ಯರೂಪಕ, ಜನಪದ ಮತ್ತು ಭಾವಗೀತೆ, ಅಭಿನಯ ಗೀತೆ, ಭಗವದ್ಗೀತೆ ಪಠಣ ಎರಡನೇ ಗುಂಪಿನಲ್ಲಿ ಸಾರ್ವಜನಿಕ ಭಾಷಣ,ವೇದಗಣಿತ, ಕೃತಕ ಬುದ್ದಿವಂತಿಕೆ, ವೆಬ್ ವಿನ್ಯಾಸ, ಸೌಂದರ್ಯ ಮತ್ತು ಸ್ವಾಸ್ಯ, ಸ್ಟ್ರೀಟ್ ಪ್ಲೇ, ಕಥೆ ಹೇಳುವುದು, ವಿಜ್ಞಾನ ಪ್ರಯೋಗಗಳು, ಮೂರನೇ ಗುಂಪಿನಲ್ಲಿ ವಾಲಿಬಾಲ್, ಕಬಡ್ಡಿ, ಶಟಲ್ ಬ್ಯಾಡ್ಮಿಂಟನ್, ಕರಾಟೆ, ಯೋಗಾ, ಜುಂಬಾ, ಸಾಂಪ್ರದಾಯಿಕ ಆಟಗಳು, ನಾಲ್ಕನೇ ಗುಂಪಿನಲ್ಲಿ ಪಪಿಟ್ ಥಿಯೇಟರ್, ಪೆಟ್ ಜಾಗೃತಿ, ನೇಚರ್ ವಾಕ್, ತೋಟಗಾರಿಕೆ, ಕ್ಷೇತ್ರ ಪ್ರವಾಸ, ಟ್ರೇಷರ್ ಹಂಟ್, ಪ್ರತಿಭಾ ಪ್ರದರ್ಶನ, ಸಾಂಪ್ರದಾಯಿಕ ದಿನ, ಬೆಂಕಿ ಇಲ್ಲದೆ ಅಡುಗೆ, ಚಲನಚಿತ್ರದ ವಿಕ್ಷಣೆ ಐದನೇ ಗುಂಪಿನಲ್ಲಿ ಬರ್ಡ್ ಪೀಡರ್, ರಾಕ್ ಪೇಂಟಿಂಗ್, ಗೊಂಬೆ ತಯಾರಿಕೆ, ಬಾಟಲ್ ಆರ್ಟ್, ಮಂಡಲ ಮತ್ತು ವರ್ಲಿಕಲೆ, 3ಡಿ ಕ್ರಾಪ್ಟ್ಸ್, ವಾಲ್ ಹ್ಯಾಂಗಿಂಗ್ಸ್, ಕ್ಲೇ ಆರ್ಟ್, ರಂಗೋಲಿ, ಚಿತ್ರಕಲೆಯನ್ನು ಆಯೋಜಿಸಲಾಗಿದೆ.

ಈ ಶಿಬಿರದ ನೋಂದಾಣಿಯನ್ನು ಆನ್‌ಲೈನ್ ಲಿಂಕ್‌ನಲ್ಲಿ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಮಾಡಬಹುದು. ಹೆಚ್ಚಿನ ಮಾಹಿತಿಗೋಸ್ಕರ 9148270545 ಮೊಬೈಲು ಸಂಖ್ಯೆಯನ್ನು ಸಂಪರ್ಕಿಸಬಹುದು. ಶಿಬಿರದಲ್ಲಿ ಭಾಗವಹಿಸುವರಿಗೆ ಜ್ಯೂಸ್, ಊಟ ಮತ್ತು ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

Mrs. Babitha Suraj Principal Mr. Bhaskara N PGT – Social...