Call Us :
+91 96860 00046
CBSE

Shakthi Education Trust

+91 9108043552
info@shakthi.edu.in

ಜ್ಯೋತಿ ಪ್ರದಾನ ಹಾಗೂ ಬೀಳ್ಕೊಡುಗೆ ಸಮಾರಂಭ

ಶಕ್ತಿ ವಿದ್ಯಾಸಂಸ್ಥೆಯಲ್ಲಿ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಗೆ ಬೀಳ್ಕೊಡುಗೆ ಸಮಾರಂಭ ವಿಗ್ಮಾ 2024-25 ವಿಜೃಂಭಣೆಯಿಂದ ಜರಗಿತು.

ಈ ಸಂದರ್ಭದಲ್ಲಿ ಪ್ರಾಂಶುಪಾಲೆ ಬಬಿತಾ ಸೂರಜ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯ ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು.

ಈ ಸಮಾರಂಭದಲ್ಲಿ ದೀಪವನ್ನು ಬೆಳಗಿಸಿ ನಂತರ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಶಕ್ತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ಸಂಜಿತ್ ನಾೖಕ್‌ ಅವರು ಗುರುಗಳ ಮೇಲೆ ಇಟ್ಟಿರುವ ನಿಮ್ಮ ಪ್ರೀತಿ ಭಕ್ತಿ ಮೆಚ್ಚುವಂತದ್ದು, ಅದು ಕೇವಲ ಬೀಳ್ಕೊಡುಗೆ ಅಥವಾ ಗುಡ್ ಬೈ ಹೇಳುವುದಲ್ಲ. ಇದು ಮುಂದಿನ ಜೀವನದಲ್ಲಿ ಮತ್ತೊಂದು ಹಂತಕ್ಕೆ ಹೊಸ ಹೆಜ್ಜೆ ಇಡುವುದು ಎಂದರ್ಥ. ನೀವು ಇಲ್ಲಿಂದ ಸಾಕ? ನೆನಪುಗಳನ್ನು ತೆಗೆದುಕೊಂಡು ಬೇರೆ ಬೇರೆ ಕಡೆಗಳಿಗೆ ಹೋದರೂ ನೀವು ಎಂದೆದಿಗೂ ಶಕ್ತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾಗಿರುತ್ತೀರಿ. ಮುಂಬರುವ ನಿಮ್ಮ ಬೋರ್ಡ್ ಪರೀಕ್ಷೆಗೆ ಶುಭವಾಗಲಿ ಎಂದು ಹಾರೈಸಿದರು.

ನಂತರ ಮಾತನಾಡಿದ ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರರಾಗಿರುವ ಶ್ರೀ ರಮೇಶ್ ಕೆ ಗುರುಗಳು ಯಾವುದೋ ಒಂದು ಕಾರಣಕ್ಕಾಗಿ ವಿದ್ಯಾರ್ಥಿಗಳಿಗೆ ಗದರುತ್ತಾರೆ, ಆದನ್ನು ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯದ ಏಳಿಗೆಗೆ ಎಂದು ಧನಾತ್ಮಕವಾಗಿ ಸ್ವೀಕರಿಸಬೇಕು. ಈಗಾಗೇ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣಕ್ಕಾಗಿ ಮತ್ತು ಶಕ್ತಿ ಪೌಂಢೇಶನ್ ಕೋರ್ಸ್‌ಗಳ ಕುರಿತಾದ ವಾರ್ಷಿಕ ಯೋಜನೆಯುಳ್ಳ ಪುಸ್ತಕವು ಮುದ್ರಣಗೊಂಡು, ಮುಂದಿನ ದಿನಗಳಲ್ಲಿ ಅದು ಜಾರಿಗೆ ಬರುತ್ತದೆ. ವಿದ್ಯಾರ್ಥಿಗಳು ಇದರಿಂದ ಬಹಳಷ್ಟು ಉಪಯೋಗಗಳನ್ನು ಪಡೆದುಕೊಳ್ಳಬಹುದಾಗಿ ತಿಳಿಸಿ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

ವಿದ್ಯಾರ್ಥಿಗಳಾದ ಆದಿತ್, ಯಶ್ವಂತ್, ಆಯಿನ ಹಾಗೂ ನಿಖಲ್ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಕಳೆದ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮನರಂಜನಾತ್ಮಕ ಆಟಗಳನ್ನು ಆಯೋಜಿಸಲಾಗಿತ್ತು.

ವಿದ್ಯಾಭ್ಯಾಸವನ್ನು ಪಡೆದುಕೊಂಡ ಸಿಹಿ ನೆನಪಿಗಾಗಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಶಕ್ತಿ ವಿದ್ಯಾಸಂಸ್ಥೆಗೆ ಪ್ರೀತಿ ಪೂರ್ವಕವಾಗಿ ಉಡುಗೊರೆಯೊಂದನ್ನು ನೀಡಿದರು.

ಈ ಸಮಾರಂಭದಲ್ಲಿ ಶಕ್ತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ.ಕೆ. ಸಿ. ನಾೖಕ್‌ ಅವರು ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವೆಂಕಟೇಶ್ ಮೂರ್ತಿ ಉಪಸ್ಥಿತರಿದ್ದರು.

ಶಿಕ್ಷಕಿ ಶ್ರೀಮತಿ ಮಧುರ ಸ್ವಾಗತಿಸಿದರು ಹಾಗು ಶ್ರೀಮತಿ ನಯನ ಇವರು ನಿರೂಪಿಸಿದರು ಹಾಗೂ ಸ್ಮ್ರತಿ ವಂದಿಸಿದರು.

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

  Mrs. Babitha Suraj Principal MSc, B.Ed 25 Years’ Experience...