ಶಕ್ತಿನಗರದ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಸಾನಿಧ್ಯ ವಸತಿ ಶಾಲೆಯ ಮಕ್ಕಳಿಗಾಗಿ ಒಂದು ದಿನದ ಸಾಂಸ್ಕೃತಿಕ ಮನೋರಂಜನ ಕಾರ್ಯಕ್ರಮ ಏರ್ಪಟ್ಟಿತು. ಶಾಲೆಯ ವಿದ್ಯಾರ್ಥಿಗಳು ಸಮೂಹ ಗಾಯನ, ಕರಾಟೆ ಪ್ರದರ್ಶನ, ಯೋಗ ಪ್ರದರ್ಶನ ಹಾಗೂ ಏಕಲವ್ಯ ರೂಪಕ ನೃತ್ಯವನ್ನು ಪ್ರಸ್ತುತ ಪಡಿಸಿದರು. ತದ ನಂತರ ಖ್ಯಾತ ಸಂಗೀತ ಸಂಯೋಜಕರಾದ ಶ್ರೀ ಮುರಳೀಧರ ಕಾಮತ್ ಹಾಗೂ ಖ್ಯಾತ ಸಂಗೀತಗಾರರಾದ ಪ್ರಕಾಶ್ ಮಹಾದೇವನ್ರವರ ಸಂಗೀತ ಕಾರ್ಯಕ್ರಮ ಏರ್ಪಟ್ಟಿತು.









ಸಾನಿಧ್ಯ ಶಾಲೆಯ ವಿದ್ಯಾರ್ಥಿಗಳಿಗಾಗಿ ಕೆಲವು ಆಟೋಟದ ಸ್ವರ್ಧೆಯನ್ನು ಏರ್ಪಡಿಸಿ, ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ತುಳು ಹಾಡಿಗೆ ನರ್ತಿಸುತ್ತ ಸಂಭ್ರಮಿಸಿದರು.
ಸಾನಿಧ್ಯ ವಸತಿ ಶಾಲೆಯ ಆಡಳಿತಾಧಿಕಾರಿ ಡಾ| ವಸಂತ್ ಶೆಟ್ಟಿಯವರು ಮಾತನಾಡಿ ಶಕ್ತಿ ಶಾಲೆಯ ವಿದ್ಯಾರ್ಥಿಗಳಿಂದ ನಡೆಸಲ್ಪಟ್ಟ ಸಾಂಸ್ಕೃತಿಕ ಕಾರ್ಯಕ್ರಮವು ಸುಂದರವಾಗಿದ್ದು ಶಾಲಾ ವಿದ್ಯಾರ್ಥಿಗಳಿಗೆ, ಆನಂದವನ್ನುಂಟು ಮಾಡಿದೆ ಎಂದು ಶಕ್ತಿ ಶಾಲೆಯ ಆಡಳಿತ ಮಂಡಳಿ ಪ್ರಾಂಶುಪಾಲರು, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಯಕ್ರಮದಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರು ಶಿಕ್ಷಕವೃಂದ, ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮವನ್ನು ಶಿಕ್ಷಕಿ ಅಕ್ಷತ ಎಂ. ಜಿ ನಿರೂಪಿಸಿದರು. ಶಿಕ್ಷಕ ಪೂರ್ಣೇಶ್ ವಂದಿಸಿದರು.

