ಶಕ್ತಿನಗರದ ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜು ವತಿಯಿಂದ “ಶಕ್ತಿ ಕ್ಯಾನ್ ಕ್ರಿಯೇಟ್” ದಸರಾ ರಜಾಕಾಲದ ಶಿಬಿರವು ದಿನಾಂಕ: 9-10-2018 ರಿಂದ 14-10-2018 ರ ತನಕ ಶಕ್ತಿ ವಸತಿ ಶಾಲೆಯಲ್ಲಿ ನಡೆಯಲಿದೆ. ಈ ಶಿಬಿರದಲ್ಲಿ ಜಿಲ್ಲೆಯ ಅಥವಾ ರಾಜ್ಯದ ಯಾವುದೇ ವಿದ್ಯಾರ್ಥಿಯು ಪಾಲ್ಗೊಳ್ಳಬಹುದು. ಶಿಬಿರವು 1 ನೇ ತರಗತಿಯಿಂದ 4 ನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ 5ನೇ ತರಗತಿಯಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ. ಪೂರ್ವಾಹ್ನ 9 ರಿಂದ ಸಂಜೆ 5 ರ ತನಕ ಶಿಬಿರವು ನಡೆಯುತ್ತದೆ. ಈ ಶಿಬಿರದಲ್ಲಿ ಚಿತ್ರಕಲೆ, ಕರಕುಶಲಕಲೆ, ವ್ಯಂಗ್ಯಚಿತ್ರ, ಫೋಮ್ ಆರ್ಟ್ ಮುಖವಾಡ ರಚನೆ, ಆವೆ ಮಣ್ಣಿನ ರಚನೆ, ವರ್ಲಿ ಆರ್ಟ್, ಕಾವಿ ಕಲೆ, ಗ್ರೀಟಿಂಗ್ ಕಾರ್ಡ್, ಗಾಳಿಪಟ ರಚನೆ, ರಂಗೋಲಿ, ಮಾನವ ಸಂಪನ್ಮೂಲ ತರಬೇತಿ, ನಾಯಕತ್ವ ತರಬೇತಿ ಭಾಷಣ ಕಲೆ, ಕೈ ಬರಹ ಸುಧಾರಿಸಿ, ಹಾಡು, ಕುಣಿತ, ಪೇಪರ್ ಕಟ್ಟಿಂಗ್, ಜನಪದ ಕುಣಿತ, ಕಥೆ ಕೇಳು – ಹೇಳು, ನಟನೆ, ಕಿರು ನಾಟಕ ತರಬೇತಿ ನಡೆಯಲಿದೆ. ಕೊನೆಯ ದಿನ ಗಾಳಿಪಟ ಹಾರಿಸುವುದು ಹಾಗೂ ಪಿಲಿಕುಳ ಗೃಹ ವೀಕ್ಷಣಾಲಯ ಸಂದರ್ಶನ ನಡೆಯಲಿದೆ.
ಭಾಗವಹಿಸಲಿರುವ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಖ್ಯಾತಿಯ ಸಂಪನ್ಮೂಲ ವ್ಯಕ್ತಿಗಳು:
ವೆಂಕಿ ಪಲಿಮಾರ್, ಪಿ.ಎನ್ ಆಚಾರ್‍ಯ ಮಣಿಪಾಲ, ಪೆರ್ಮುದೆ ಮೋಹನ್ ಕುಮಾರ್, ಜಾನ್ ಚಂದ್ರನ್, ದಿನೇಶ್ ಹೊಳ್ಳ, ವೀಣಾ ಶ್ರೀನಿವಾಸ್, ಜಯರಾಮ್ ನಾವುಡ, ಸುಧೀರ್ ಕಾವೂರು, ಪೂರ್ಣೇಶ್ ಪಿ. ಶ್ರೀಮತಿ ರತ್ನಾವತಿ ಜೆ. ಬೈಕಾಡಿ, ಶ್ರೀ ದೇವಿ ಉಡುಪಿ, ಸಚಿತಾ ನಂದಗೋಪಾಲ್ ಮುಂತಾದ ಪ್ರಮುಖ ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಖ್ಯಾತಿಯ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ನೋಂದಣಿಗೆ ಈ ಕೆಳಗಿನ ವ್ಯಕ್ತಿಗಳನ್ನು ಹಾಗೂ ವೆಬ್ ಸೈಟನ್ನು ಸಂಪರ್ಕಿಸಬಹುದು.
ನೋಂದಣಿಗೆ ಸಂಪರ್ಕಿಸುವ ವ್ಯಕ್ತಿ ಹಾಗೂ ವಿಳಾಸ :
ಶಕ್ತಿ ವಸತಿ ಶಾಲೆ, ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಹತ್ತಿರ, ಶಕ್ತಿನಗರ, ಮಂಗಳೂರು-575016, ಆನ್ ಲೈನ್ ನೋಂದಾವಣಿ: www.sgkpreschool.shakthi.net.in, Email: info@sgkpreschool.shakthi.net.in / office@sgkpreschool.shakthi.net.in ಕಛೇರಿ: 0824-2230452, ಬೈಕಾಡಿ ಜನಾರ್ದನ ಆಚಾರ್ – 9449054962, ಪ್ರಭಾಕರ್ ಜಿ.ಎಸ್ – 9916535668, ರಮೇಶ್.ಕೆ -9611588813, ನಸೀಮ್ ಬಾನು – 9686000046, ನೀಮಾ ಸಕ್ಸೇನಾ – 8105899070, ನೋಂದಣಿಯ ಕೊನೆಯ ದಿನಾಂಕ: 07.10.2018.