Call Us :
+91 96860 00046
CBSE

Shakthi Education Trust

+91 9108043552
info@shakthi.edu.in

ಸಾನಿಧ್ಯ ವಸತಿ ಶಾಲೆಯ ಮಕ್ಕಳಿಗಾಗಿ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ

ಶಕ್ತಿನಗರದ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಸಾನಿಧ್ಯ ವಸತಿ ಶಾಲೆಯ ಮಕ್ಕಳಿಗಾಗಿ ಒಂದು ದಿನದ ಸಾಂಸ್ಕೃತಿಕ ಮನೋರಂಜನ ಕಾರ್ಯಕ್ರಮ ಏರ್ಪಟ್ಟಿತು. ಶಾಲೆಯ ವಿದ್ಯಾರ್ಥಿಗಳು ಸಮೂಹ ಗಾಯನ, ಕರಾಟೆ ಪ್ರದರ್ಶನ, ಯೋಗ ಪ್ರದರ್ಶನ ಹಾಗೂ ಏಕಲವ್ಯ ರೂಪಕ ನೃತ್ಯವನ್ನು ಪ್ರಸ್ತುತ ಪಡಿಸಿದರು. ತದ ನಂತರ ಖ್ಯಾತ ಸಂಗೀತ ಸಂಯೋಜಕರಾದ ಶ್ರೀ ಮುರಳೀಧರ ಕಾಮತ್ ಹಾಗೂ ಖ್ಯಾತ ಸಂಗೀತಗಾರರಾದ ಪ್ರಕಾಶ್ ಮಹಾದೇವನ್‌ರವರ ಸಂಗೀತ ಕಾರ್ಯಕ್ರಮ ಏರ್ಪಟ್ಟಿತು.

ಸಾನಿಧ್ಯ ಶಾಲೆಯ ವಿದ್ಯಾರ್ಥಿಗಳಿಗಾಗಿ ಕೆಲವು ಆಟೋಟದ ಸ್ವರ್ಧೆಯನ್ನು ಏರ್ಪಡಿಸಿ, ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ತುಳು ಹಾಡಿಗೆ ನರ್ತಿಸುತ್ತ ಸಂಭ್ರಮಿಸಿದರು.

ಸಾನಿಧ್ಯ ವಸತಿ ಶಾಲೆಯ ಆಡಳಿತಾಧಿಕಾರಿ ಡಾ| ವಸಂತ್ ಶೆಟ್ಟಿಯವರು ಮಾತನಾಡಿ ಶಕ್ತಿ ಶಾಲೆಯ ವಿದ್ಯಾರ್ಥಿಗಳಿಂದ ನಡೆಸಲ್ಪಟ್ಟ ಸಾಂಸ್ಕೃತಿಕ ಕಾರ್ಯಕ್ರಮವು ಸುಂದರವಾಗಿದ್ದು ಶಾಲಾ ವಿದ್ಯಾರ್ಥಿಗಳಿಗೆ, ಆನಂದವನ್ನುಂಟು ಮಾಡಿದೆ ಎಂದು ಶಕ್ತಿ ಶಾಲೆಯ ಆಡಳಿತ ಮಂಡಳಿ ಪ್ರಾಂಶುಪಾಲರು, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಯಕ್ರಮದಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರು ಶಿಕ್ಷಕವೃಂದ, ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮವನ್ನು ಶಿಕ್ಷಕಿ ಅಕ್ಷತ ಎಂ. ಜಿ ನಿರೂಪಿಸಿದರು. ಶಿಕ್ಷಕ ಪೂರ್ಣೇಶ್ ವಂದಿಸಿದರು.

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

  Mrs. Babitha Suraj Principal MSc, B.Ed 25 Years’ Experience...