ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶಕ್ತಿ ಕ್ಯಾನ್ ಕ್ರಿಯೇಟ್-2025 ಎಂಬ ಬೇಸಿಗೆ ಶಿಬಿರ ಮತ್ತು ಈಜು ಶಿಬಿರವನ್ನು ಆಯೋಜಿಸಲಾಗಿದೆ. ಈ ಬೇಸಿಗೆ ಶಿಬಿರದಲ್ಲಿ ಪ್ರಿ ಕೆಜಿಯಿಂದ 7 ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಅಂದರೆ 3 ವರ್ಷದಿಂದ 12 ವರ್ಷದವರೆಗಿನ ವಿದ್ಯಾರ್ಥಿಗಳು ನೋಂದಾಣಿ ಮಾಡಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಬೇಸಿಗೆ ಶಿಬಿರವು ದಿನಾಂಕ ಏಪ್ರಿಲ್ 1 ರಿಂದ ಏಪ್ರಿಲ್ 12 ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3.30 ರವರೆಗೆ ನಡೆಯಲಿದೆ. ಬೇಸಿಗೆ ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಊಟ ಮತ್ತು ಲಘ ಉಪಹಾರವನ್ನು ಹಾಗೂ ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಬೇಸಿಗೆ ಶಿಬಿರದಲ್ಲಿ ಮ್ಯಾಜಿಕ್, ಮಡಿಕೆ ತಯಾರಿಕೆ, ಚಲನಚಿತ್ರದ ವಿಕ್ಷಣೆ, ಪೈಜಾಮ ಪಾರ್ಟಿ, ಬೆಂಕಿ ಇಲ್ಲದೆ ಅಡುಗೆ, ಕಥೆ ಹೇಳುವುದು, ಆರೋಗ್ಯ ಮತ್ತು ನೈರ್ಮಲ್ಯ, ವಾಟರ್ ಸ್ಪ್ಲಾಶ್ ಪಾರ್ಟಿ, ತೋಟಗಾರಿಕೆ, ನೃತ್ಯ, ಜುಂಬಾ, ಈಜು, ಆಟೋಟ, ನಾಟಕ ಸೇರಿದಂತೆ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಅನೇಕ ಕಾರ್ಯಕ್ರಮವನ್ನು ಈ ಶಿಬಿರದಲ್ಲಿ ಆಯೋಜಿಸಲಾಗಿದೆ.
ಈಜು ಸ್ಪರ್ಧೆಯು ಏಪ್ರಿಲ್ 1 ರಿಂದ 24 ರವರೆಗೆ ನಡೆಯುತ್ತದೆ. 4 ವರ್ಷದಿಂದ 17 ವರ್ಷ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳು ಮತ್ತು ವಯಸ್ಕರು ಭಾಗವಹಿಸಬಹುದು. ಇವರಿಗೆ ಪ್ರತಿ ಈಜು ತರಬೇತಿಯು ಒಂದು ಗಂಟೆ ಆಗಿರುತ್ತದೆ.
ಬೇಸಿಗೆ ಶಿಬಿರ ಮತ್ತು ಈಜು ಶಿಬಿರದಲ್ಲಿ ಭಾಗವಹಿಸುವ ಪ್ರತಿನಿಧಿಗಳು ದಿನಾಂಕ 25-3-2025 ರೊಳಗಡೆ ಈ ಕೆಳಗಿನ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ನೋಂದಾವಣೆ ಮಾಡಬಹುದು. ಹೆಚ್ಚಿನ ಮಾಹಿತಿಗೋಸ್ಕರ 9148270545, 7090795949 ಕ್ಕೆ ಸಂಪರ್ಕಿಸಬೇಕಾಗಿ ವಿನಂತಿ.