ಶಕ್ತಿನಗರದ ಶಕ್ತಿ ರೆಸಿಡೆನ್ಯಿಯಲ್ ಶಾಲೆ 8ನೇ ತರಗತಿ ವಿದ್ಯಾರ್ಥಿ ಶಾಸ್ತಾ ನಾೖಕ್ 2025 ಮಾರ್ಚ್ 21 ರಿಂದ 27ರ ತನಕ ಉತ್ತರ ಆಫ್ರೀಕದ ಟುನೀಶಿಯಾದಲ್ಲಿ ನಡೆದ The International Festival of Engineering Science and Technology in , Tunisia (1-FEST2) ನಲ್ಲಿ ಸೈನ್ಸ್ ಸೊಸೈಟಿ ಆಪ್ ಇಂಡಿಯಾದಿಂದ ಏಕೈಕ ಭಾರತೀಯ ಪ್ರತಿನಿಧಿಯಾಗಿ ಭಾಗವಹಿಸಿ ಆಟೋಮ್ಯಾಟಿಕ್ ಕೋಕೊ ಸಾಪ್ ಎಕ್ಸ್ ಟ್ರಾಕ್ಟರ್ ಎಂಬ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮಗಳಲ್ಲಿ ಜಗತ್ತಿನ 70 ದೇಶಗಳ 1400 ಪ್ರತಿನಿಧಿಗಳು ಭಾಗವಹಿಸಿದರು. ಈ ವಿಜ್ಞಾನ ಮಾದರಿಯಲ್ಲಿ ತೆಂಗಿನ ಮರದಿಂದ ನೀರಾವನ್ನು ಅಟೋಮ್ಯಾಟಿಕ್ ಯಂತ್ರದ ಮೂಲಕ ಇಳಿಸುವ ಪ್ರಾತ್ಯಕ್ಷಿಕೆಯನ್ನು ನೀಡಿರುತ್ತಾರೆ. ತೆಂಗಿನ ಮರದ ಕೊಂಬನ್ನು ನೀರಾ ತೆಗೆಯಲು ಹದಾಗೊಳಿಸುವ ಸರಳ ವಿಧಾನದ ಮೂಲಕ ಮಾನವ ರಹಿತವಾಗಿ ನೀರಾ ಇಳಿಸುವ ಮಾದರಿಗೆ ಅಂತರಾಷ್ಟ್ರೀಯ ಮನ್ನಣೆ ದೊರೆತು ಅಯ್ಕೆಯಾಗಿರುವುದು ಶಾಸ್ತಾ ನಾೖಕ್‌ನ ಸಾಧನೆಗೆ ಸಿಕ್ಕಿರುವ ಬಹು ದೊಡ್ಡ ಯಶಸ್ಸಾಗಿರುತ್ತದೆ.
ಶಾಸ್ತಾ ನಾೖಕ್ ಕಳೆದ 3 ವರ್ಷಗಳಿಂದ ಅನೇಕ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಾಧನೆಯನ್ನು ಮಾಡುತ್ತಾ ಬರುತ್ತಿದ್ದಾನೆ. ಇವನ ಮಾದರಿಯು ನಮ್ಮ ದೇಶದ ರೈತರಿಗೆ ಕಡಿಮೆ ಖರ್ಚಿನಲ್ಲಿ ನೀರಾ ಇಳಿಸಲು ಉಪಯೋಗವಾಗುವ ತಂತ್ರಜ್ಞಾನವಾಗಿದೆ. ಈ ಸಾಧನೆಯನ್ನು ಗುರುತಿಸಿ ಟುನೀಶಿಯದಲ್ಲಿ ಬೆಳ್ಳಿ ಪದಕ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇವರು ಭಾರತವನ್ನು ವಿಶ್ವ ವೇದಿಕೆಯಲ್ಲಿ ಪ್ರತಿನಿಧಿಸಿದ ಶಕ್ತಿ ರೆಸಿಡೆನ್ಯಿಯಲ್ ಶಾಲೆಯ ವಿದ್ಯಾರ್ಥಿಯಾಗಿದ್ದು, ಶ್ರೀನಾಥ್ ನಾೖಕ್ ವಿ. ಹಾಗೂ ಶ್ರೀಮತಿ ಚಂದ್ರಿಕಾ ಶ್ರೀನಾಥ್ ದಂಪತಿಗಳ ಸುಪುತ್ರನಾಗಿರುತ್ತಾನೆ. ಇವರ ಅಸಾಧಾರಣ ಸಾಧನೆಗೆ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್, ಕಾರ್ಯದರ್ಶಿಗಳಾದ ಶ್ರೀ ಸಂಜಿತ್ ನಾೖಕ್, ಪ್ರಧಾನ ಸಲಹೆಗಾರರಾದ ಶ್ರೀ ರಮೇಶ್ ಕೆ. ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಹಾಗೂ ಶಕ್ತಿ ರೆಸಿಡೆನ್ಯಿಯಲ್ ಶಾಲೆಯ ಪ್ರಾಂಶುಪಾಲರಾದ ಬಬಿತಾ ಸೂರಜ್, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
On April 3rd, 2025, the “International Festival of Engineering Science and Technology” (1-FEST2) will take place in Tunisia, highlighting cutting-edge advancements in engineering, science technology. The festival aims to bring together experts, researchers, and innovators to share their work and foster interdisciplinary collaboration. The event will feature presentations, discussions, and workshop on ground-breaking engineering and technological advancement.
The festival is an excellent opportunity for participants to network and exchange ideas on current trends in engineering and technology. Additionally, it will provide a platform for exchanging insights on cutting edge research and innovations in various sectors.